ಜನಸೇನಾ ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮದೇ ಸ್ವಂತ ಪಕ್ಷ ಸ್ಥಾಪನೆ ಮಾಡಿದಾಗಿನಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಲ್ಲದೆ, ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಜನರ ಸೇವೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ ಎಂದು ಕೂಡಾ ಹೇಳಿದ್ದರು.
ಮತ್ತೆ ಸಿನಿಮಾದಲ್ಲಿ ನಟಿಸ್ತಾರಾ ಪವನ್ ಕಲ್ಯಾಣ್... ಫಿಲ್ಮ್ ಸಿಟಿಯಲ್ಲಿ ಅದೇ ಹಾಟ್ ಟಾಪಿಕ್ - ಫಿಲ್ಮ್ ನಗರ
ನಟ ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಮಾತು ಫಿಲ್ಮ್ ನಗರದಾದ್ಯಂತ ಹರಿದಾಡುತ್ತಿದೆ. ನಾನು ಇನ್ನು ಮುಂದೆ ನನ್ನ ಪಕ್ಷ ಸಂಘಟನೆ ಕಡೆ ಗಮನ ಹರಿಸಲಿದ್ದು, ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಪವರ್ ಸ್ಟಾರ್ ಬಹಳಷ್ಟು ಬಾರಿ ಹೇಳಿದ್ದರು.
![ಮತ್ತೆ ಸಿನಿಮಾದಲ್ಲಿ ನಟಿಸ್ತಾರಾ ಪವನ್ ಕಲ್ಯಾಣ್... ಫಿಲ್ಮ್ ಸಿಟಿಯಲ್ಲಿ ಅದೇ ಹಾಟ್ ಟಾಪಿಕ್](https://etvbharatimages.akamaized.net/etvbharat/prod-images/768-512-3995352-thumbnail-3x2-pawankalyan.jpg)
ಆದರೆ, ಪವನ್ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಗುಸುಗುಸು ಫಿಲ್ಮ್ ಸಿಟಿಯಲ್ಲಿ ಹರಿದಾಡುತ್ತಿದೆ. ಡಿವಿವಿ ದಾನಯ್ಯ, ಮೈತ್ರಿ ಮೂವಿ ಮೇಕರ್ಸ್, ರತ್ನಂ ನಿರ್ಮಾಣ ಸಂಸ್ಥೆ ಅಡಿ ತಯಾರಾಗಲಿರುವ ಸಿನಿಮಾಗಳಲ್ಲಿ ನಟಿಸಲು ಪವನ್ ಕಲ್ಯಾಣ್ ಅಡ್ವಾನ್ಸ್ ಪಡೆದಿದ್ದರಂತೆ. ಆದರೆ, ನಂತರ ಅವರು 2019 ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದರಿಂದ ಸಿನಿಮಾ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಎಲ್ಲವನ್ನೂ ಕ್ಲಿಯರ್ ಮಾಡಿಕೊಳ್ಳಲು ಪವನ್ ಸಿನಿಮಾದಲ್ಲಿ ನಟಿಸಲು ಸಿದ್ಧರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ನಿರ್ಮಾಣ ಸಂಸ್ಥೆಗಳು ಕಥೆ ರೆಡಿ ಮಾಡಿಕೊಂಡರೆ ತಾನು ಸೆಟ್ಗೆ ಬರುವುದಾಗಿ ಪವನ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ಈ ಸಿನಿಮಾ ನಿರ್ಮಾಣ ಸಂಸ್ಥೆಗಳಿಗೆ ತಮ್ಮ ಸಹಿಯನ್ನು ಕೂಡಾ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಮುನ್ನ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದ ಪವನ್ ಇನ್ನೆರಡು ವರ್ಷಗಳಲ್ಲಿ ಎಲ್ಲ ಸಿನಿಮಾಗಳನ್ನು ಪೂರ್ತಿ ಮಾಡಿ ನಂತರ 2022 ರ ಚುನಾವಣೆಯತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ, ಪವನ್ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಲಭ್ಯವಾಗಿಲ್ಲ. ಇದಕ್ಕಾಗಿ ಇನ್ನು ಕೆಲವು ದಿನಗಳು ಕಾಯಬೇಕಿದೆ.