ಕರ್ನಾಟಕ

karnataka

ETV Bharat / sitara

50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಸೂಪರ್​​​ ಸ್ಟಾರ್​ ಪವನ್ ಕಲ್ಯಾಣ್​ - Pawan kalyan next movie

ಪವನ್ ಕಲ್ಯಾಣ್ ಹುಟ್ಟುಹಬ್ಬದ ಹಿನ್ನೆಲೆ ಅವರ ‘ಭಿಮ್ಲಾ ನಾಯಕ್’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಅವರ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ.

pawan-kalyan-has-many-talents-in-the-last-three-decades
50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಾಲಿವುಡ್ ಸೂಪರ್​​​ ಸ್ಟಾರ್​ ಪವನ್ ಕಲ್ಯಾಣ್​

By

Published : Sep 2, 2021, 10:07 AM IST

ನಟ, ನಿರ್ದೇಶಕ, ಬರಹಗಾರ, ಸಾಹಸ ನಿರ್ದೇಶಕ, ರಾಜಕಾರಣಿ ಪವನ್​ ಕಲ್ಯಾಣ್ ಇಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 3 ದಶಕಗಳಿಂದ ತೆಲುಗು ಸೂಪರ್​ಸ್ಟಾರ್​​ ಎಂಬ ಕೀರ್ತಿ ಹಾಗೆ ಉಳಿಸಿಕೊಂಡು ಬಂದಿದ್ದಾರೆ. ಎಲ್ಲ ರೀತಿಯ ಪಾತ್ರದಿಂದಲೂ ಸಿನಿರಸಿಕರ ಮನಗೆದ್ದಿರುವ ಅವರು, ತಮ್ಮದೇ ಅಭಿಮಾನಿಗಳ ದಂಡು ಹೊಂದಿದ್ದಾರೆ.

ಇಂದು 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿಗಳು ಸಂಭ್ರಮಾಚರಿಸುತ್ತಿದ್ದಾರೆ. ಅಲ್ಲದೇ ಸಿನಿಮಾ ದಿಗ್ಗಜರು ನಟನಿಗೆ ಶುಭ ಹಾರೈಸುತ್ತಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಕಲ್ಯಾಣ್​ ಸದ್ದು ಮಾಡಿದ ವ್ಯಕ್ತಿ. ತಮ್ಮದೇ ಪಕ್ಷ ಕಟ್ಟಿ ಚುನಾವಣೆಯನ್ನೂ ಎದುರಿಸಿದ್ದರು. ಇದಿಷ್ಟೇ ಅಲ್ಲ ಪವನ್ ಕಲ್ಯಾಣ್​ಗೆ ಇನ್ನೂ ಹತ್ತು ಹಲವು ವಿಚಾರಗಳಲ್ಲಿ ಇನ್ನಿಲ್ಲದ ಆಸಕ್ತಿಯಂತೆ, ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲ ವಿಚಾರಗಳು ಇಲ್ಲಿವೆ.

ಪವನ್ ಕಲ್ಯಾಣ್ ಹೊಂದಿರುವ ದುಬಾರಿ ವಸ್ತುಗಳು

ಮಾಧ್ಯಮ ವರದಿಗಳ ಪ್ರಕಾರ, ನಟ ಹೈದರಾಬಾದ್‌ನಲ್ಲಿ ದುಬಾರಿ ಫಾರ್ಮ್‌ಹೌಸ್ ಹೊಂದಿದ್ದಾರೆ, ಅದರ ಅಂದಾಜು ಮೌಲ್ಯ ಸುಮಾರು 16 ಕೋಟಿ. ಈ ಅದ್ದೂರಿ ಐಷಾರಾಮಿ ಮನೆಗಳು ವಿಜಯವಾಡ ಮತ್ತು ಹೈದರಾಬಾದ್‌ನಲ್ಲಿದೆ. ವರದಿಯ ಪ್ರಕಾರ, ಒಮ್ಮೆ ಪವನ್ ತನ್ನ ಪತ್ನಿ ರೇಣು ದೇಸಾಯಿ ಅವರಿಗೆ 5 ಕೋಟಿ ಮೌಲ್ಯದ ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇದಲ್ಲದೇ ಹಲವು ರಿಯಲ್​ ಎಸ್ಟೇಟ್​ ಆಸ್ತಿಗಳ ಮೇಲೆ ಪವನ್ ಹೂಡಿಕೆ ಮಾಡಿದ್ದಾರೆ.

ದುಬಾರಿ ಕಾರು ಮಾಲೀಕ

ಪವನ್ ಕಲ್ಯಾಣ್ ದುಬಾರಿ ಕಾರುಗಳನ್ನೂ ಕೂಡಾ ಹೊಂದಿದ್ದಾರೆ. 2.42 ಕೋಟಿ ರೂಪಾಯಿ ಮೌಲ್ಯದ ಮರ್ಸೀಡಿಸ್ ಜಿ ಕ್ಲಾಸ್ ಜಿ 63 ಎಎಂಜಿ ಕಾರು ಹೊಂದಿದ್ದಾರೆ. ಜೊತೆಗೆ 36 ಲಕ್ಷ ರೂಪಾಯಿ ಮೌಲ್ಯದ ಎರಡು ಎಂಡೇವರ್​, ಬಿಎಂಡ್ಲ್ಯೂ 5 ಸೀರಿಸ್ 520ಡಿ, ಮರ್ಸೀಡಿಸ್ ಆರ್​-ಕ್ಲಾಸಿಕ್ ಆರ್​​​ 350 ಮತ್ತು ಆಡಿ ಕ್ಯು7 ಕಾರು ಹೊಂದಿದ್ದಾರೆ. ಇದರ ಜೊತೆಗೆ ಪವನ್ ಕಲ್ಯಾಣ್ ದುಬಾರಿ ವಾಚ್​ಗಳ ಕಲೆಕ್ಷನ್ ಸಹ ಇಟ್ಟಿದ್ದಾರೆ. ರೋಲೆಕ್ಸ್​ನ ದುಬಾರಿ ವಾಚ್ ಇವರ ಬಳಿ ಇದೆ.

ABOUT THE AUTHOR

...view details