'ಅಜ್ಞಾತವಾಸಿ' ಚಿತ್ರದ ನಂತರ ಪವನ್ ಕಲ್ಯಾಣ್, ಸಿನಿಮಾಗಳಿಂದ ದೂರ ಇದ್ದು, ತಮ್ಮ ಜನಸೇನಾ ಪಕ್ಷದ ಕಾರ್ಯಗಳಲ್ಲಿ ಬ್ಯುಸಿ ಇದ್ದರು. ಇನ್ನು ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸುವುದೇ ಇಲ್ಲ ಎಂದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಪವನ್ ಕಲ್ಯಾಣ್ ಆ್ಯಕ್ಟಿಂಗ್ಗೆ ವಾಪಸ್ಸಾಗಿದ್ದಾರೆ.
ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಗುಡ್ನ್ಯೂಸ್...! - ಟಾಲಿವುಡ್ ನ್ಯೂಸ್
ಬಾಲಿವುಡ್ನಲ್ಲಿ ವಿಜಯ ಸಾಧಿಸಿದ್ದ 'ಪಿಂಕ್' ಸಿನಿಮಾ 2016 ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಿತ್ತು. ಈದೀಗ ಈ ಸಿನಿಮಾವನ್ನು ತೆಲುಗಿನಲ್ಲಿ ಕೂಡಾ ರೀಮೇಕ್ ಮಾಡಲಾಗುತ್ತಿದ್ದು ಅದರಲ್ಲಿ ಪವನ್ ಕಲ್ಯಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಮಿತಾಬ್ ಬಚ್ಚನ್, ತಾಪ್ಸಿ ಪನ್ನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಪಿಂಕ್' ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡಲಾಗುವುದು ಎಂದು ಬಹಳ ದಿನಗಳಿಂದ ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಇದೀಗ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಟಾಲಿವುಡ್ ನಿರ್ಮಾಪಕ ದಿಲ್ ರಾಜು ಜೊತೆ ಸೇರಿ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವೇಣು ಶ್ರೀರಾಮ್ ಈ ತೆಲುಗು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ವಿಜಯ ಸಾಧಿಸಿದ್ದ 'ಪಿಂಕ್' ಸಿನಿಮಾ, 2016 ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಿತ್ತು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿತ್ತು. ನಂತರ ಈ ಸಿನಿಮಾವನ್ನು ತಮಿಳಿಗೆ ಕೂಡಾ ರೀಮೇಕ್ ಮಾಡಿದ್ದು, ಅದರಲ್ಲಿ ಶ್ರದ್ಧಾ ಶ್ರೀನಾಥ್ ಹಾಗೂ ಅಜಿತ್ ನಟಿಸಿದ್ದರು. ಇದೀಗ ಈ ಸಿನಿಮಾ ತೆಲುಗಿನಲ್ಲಿ ಕೂಡಾ ತಯಾರಾಗುತ್ತಿದೆ. ಒಟ್ಟಿನಲ್ಲಿ ಪವನ್ ಕಲ್ಯಾಣ್ ಮತ್ತೆ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷವಾಗಿದೆ.