ನಿನ್ನೆ ಅಂದ್ರೆ ಡಿಸೆಂಬರ್ 10 ರಂದು ನಿರ್ದೇಶಕ ಪವನ್ ಒಡೆಯರ್ ಅಪ್ಪನಾಗಿದ್ದಾರೆ. ಪವನ್ - ಆಪೇಕ್ಷ ದಂಪತಿಗೆ ಮುದ್ದಾದ ಗಂಡು ಮಗು ಹುಟ್ಟಿದೆ. ಈ ಖುಷಿಯನ್ನು ಪವನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರು.. ಮತ್ತೊಂದು ವಿಶೇಷ ಅಂದ್ರೆ ಅಪ್ಪನ ಹುಟ್ಟುಹಬ್ಬದ ದಿನವೇ ಮಗರಾಯ ಕೂಡ ಹುಟ್ಟಿದ್ದು, ನಿರ್ದೇಶಕ ಒಡೆಯರ್ಗೆ ಡಬಲ್ ಖುಷಿ ನೀಡಿದೆ.
ಮತ್ತೊಂದು ವಿಚಾರ ಅಂದ್ರೆ ಈ ಮಗು ಹುಟ್ಟಿ ಅಪ್ಪನಿಗೆ ಸರ್ಪ್ರೈಸ್ ಆಗಿದ್ದಂತೂ ನಿಜ. ಇದೀಗ ಆ ಮಗು ಕೂಡ ಅಪ್ಪನಿಗೆ ಹುಟ್ಟು ಹಬ್ಬದ ವಿಶ್ ಮಾಡಿದೆ. ಅರೇ.. ಹುಟ್ಟಿದ ಒಂದು ದಿನಕ್ಕೆ ಆ ಚಿಕ್ಕ ಮಗು ಹೇಗ್ ವಿಶ್ ಮಾಡ್ತು ಅಂದ್ರಾ.. ಆ ಮಗು ಮಾತನಾಡಿಲ್ಲ, ಬದಲಾಗಿ ತಾಯಿಯಾಗಿರುವ ಆಪೇಕ್ಷ ಪತಿಯ ಹುಟ್ಟು ಹಬ್ಬಕ್ಕೆ ಮಗನಿಂದ ವಿಶ್ ಮಾಡಿಸಿದ್ದಾರೆ.