ಪಕ್ಕ ಹಳ್ಳಿ ನೇಟಿವಿಟಿಯ ಚಿತ್ರವಾದ ಪಾರವ್ವನ ಕನಸು ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿ ಸದ್ಯ ರಿಲೀಸ್ಗೆ ರೆಡಿ ಮಾಡಲಾಗಿದೆ. ನಿನ್ನೆ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿತು.
ಪಾರವ್ವನ ಕನಸು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಡಿ.ಆರ್. ಜೈರಾಜ್ ಕಾರ್ಯದರ್ಶಿಗಳಾದ ಎನ್ಎಮ್ ಸುರೇಶ್ ಹಾಗೂ ಮಾಜಿ ಅಧ್ಯಕ್ಷರಾದ ಚಿನ್ನೇಗೌಡರು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇನ್ನೂ ಹೊಸಬರೇ ಅಭಿನಯದ ಪಾರವ್ವನ ಕನಸು ಚಿತ್ರವನ್ನು ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಬರೆದು ಸಿ ಮಲ್ಲಿಕಾರ್ಜುನ್ ನಿರ್ದೇಶನ ಮಾಡಿದ್ದಾರೆ. ಪಾರವ್ವನ ಕನಸು ಚಿತ್ರ ಪಕ್ಕ ಹಳ್ಳಿ ನೇಟಿವಿಟಿ ಚಿತ್ರವಾಗಿದ್ದು, ಗಾರ್ಮೆಂಟ್ಸ್ ನಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿ ಹಾಗೂ ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಈ ಚಿತ್ರದಲ್ಲಿ ಸೇರಿಸಿ ಸಿನಿಮಾ ಮಾಡಿರುವುದಾಗಿ ನಿರ್ದೇಶಕ ಸಿ ಮಲ್ಲಿಕಾರ್ಜುನ್ ತಿಳಿಸಿದರು.
ಇನ್ನು ಹಳ್ಳಿಯಲ್ಲಿ ವಾಸ ಮಾಡುವ ಪರ್ವ ಎಂಬ ಮಹಿಳೆ ತಾನು ವಾಸ ಮಾಡುವ ಹಳ್ಳಿಯಲ್ಲಿ ತಾನು 1 ಪುಟ್ಟ ಮನೆಯನ್ನು ಕಟ್ಟಿಸಿಕೊಳ್ಳಬೇಕು, ಹಾಗೂ ತನ್ನ ಮಕ್ಕಳಿಗೆ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಮುಗ್ಧ ತಾಯಿಯ ಆಸೆ ಹೊಂದಿರುವ ಈ ಚಿತ್ರದಲ್ಲಿ ಪಾರವ್ವಳಾಗಿ ಅಪೂರ್ವ ಶ್ರೀ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ಆರ್ ಸುರೇಶ್ ನಟಿಸಿದ್ದಾರೆ. ಅಲ್ಲದೆ ನಟನೆ ಜೊತೆ ನಿರ್ಮಾಣವನ್ನು ಧೀಮಂತ್ ಪ್ರೊಡಕ್ಷನ್ ಅಡಿಯಲ್ಲಿ ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು ವೃತ್ತಿಯಲ್ಲಿ ಬಿಲ್ಡರ್ ಆದ ಸುರೇಶ್ ಅಭಿನಯಿಸಿದ ಮೊದಲ ಚಿತ್ರವಾಗಿದೆ. ಅಲ್ಲದೆ 5 ಬಿಲ್ಡಿಂಗ್ ಗಳನ್ನು ಬೇಕಾದರೂ ಕಟ್ಟಬಹುದು ಆದರೆ, ಒಂದು ಸಿನಿಮಾವನ್ನು ಮಾಡುವುದು ಕಷ್ಟ ಎಂಬ ಅನುಭವ ಈ ಚಿತ್ರದ ಮೂಲಕ ಸುರೇಶ್ಗೆ ಗೊತ್ತಾಗಿದೆ.
ಅಲ್ಲದೆ, ಈ ಚಿತ್ರದಲ್ಲಿ ನಾಯಕಿಯಾಗಿ ಹೊಸ ನಟಿ ರಶ್ಮಿತಾ ಇದು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಚಿತ್ರದಲ್ಲಿ ಮಜಾಭಾರತ ಖ್ಯಾತಿಯ ಚಂದ್ರಪ್ರಭ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಬರೋಬ್ಬರಿ ಏಳು ಹಾಡುಗಳಿದ್ದು ತರುಣ್ ತಾಯಿ ಮಾನಸಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು. ಮುಂದಿನ ತಿಂಗಳು ಈ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.