ಬಿಗ್ಬಾಸ್ ಅಂದ್ರೆ ಹಾಗೆನೇ. ಏನೋ ಒಂಥರಾ ಟೆನ್ಷನ್, ಕುತೂಹಲ, ಹೊಸತನ, ಹೊಸ ಜನ ಎಲ್ಲವೂ ಒಟ್ಟೊಟ್ಟಿಗೆ ಇರುತ್ತದೆ. ಈ ಟೆನ್ಷನ್ ಮತ್ತೆ ಶುರುವಾಗಲಿದ್ದು, ಇದೇ ಭಾರನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಲಿದೆ.
ಬಿಗ್ಬಾಸ್ಗೆ ಮೋಸ್ಟ್ ಸೀನಿಯರ್ ಅಂದ್ರೆ ಕಿಚ್ಚ ಸುದೀಪ್: ಪರಮೇಶ್ವರ್ ಗುಂಡ್ಕಲ್ - ಸುದೀಪ್ ಮೋಸ್ಟ್ ಸೀನಿಯರ್
ಇಡೀ ಬಿಗ್ಬಾಸ್ ಕಾರ್ಯಕ್ರಮಕ್ಕೆ ಮೆರಗು ನೀಡುವ ಸುದೀಪ್ರನ್ನ ಬಿಗ್ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್, ಬಿಗ್ಬಾಸ್ಗೆ ಮೋಸ್ಟ್ ಸೀನಿಯರ್ ಅಂತ ಹೇಳಿದ್ದಾರೆ. ಕಳೆದ ಏಳು ಸೀಸನ್ಗಳಲ್ಲಿಯೂ ಸುದೀಪ್ ಗೈಡ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ತಂಡಕ್ಕೆ ಒಳ್ಳೆ ಕ್ರಿಯೇಟಿವ್ ಐಡಿಯಾಗಳನ್ನು ಕೊಟ್ಟು, ಒಬ್ಬ ನಟನಾಗಿ, ನಿರ್ದೇಶಕನಾಗಿ ನಿಂತು ಈ ಶೋ ಚೆನ್ನಾಗಿ ಮೂಡಿ ಬರುಲು ಕಾರಣರಾಗಿದ್ದಾರೆ ಎಂದು ಗುಂಡ್ಕಲ್ ಹೇಳಿದ್ರು.
![ಬಿಗ್ಬಾಸ್ಗೆ ಮೋಸ್ಟ್ ಸೀನಿಯರ್ ಅಂದ್ರೆ ಕಿಚ್ಚ ಸುದೀಪ್: ಪರಮೇಶ್ವರ್ ಗುಂಡ್ಕಲ್](https://etvbharatimages.akamaized.net/etvbharat/prod-images/768-512-4711026-thumbnail-3x2-giri.jpg)
ಈ ಬಿಗ್ಬಾಸ್ನಲ್ಲಿ ಮುಖ್ಯವಾಗಿ ಅಟ್ರ್ಯಾಕ್ಟ್ ಆಗೋದು ಅಂದ್ರೆ ಶನಿವಾರ ಮತ್ತು ಭಾನುವಾರ ಬರುವ ಕಿಚ್ಚ ಸುದೀಪ್, ಇವರ ಮಾತು, ಸ್ಟೈಲ್, ಕಂಟೆಸ್ಟೆಂಟ್ಗಳ ಕಾಲೆಳೆಯುವ ಅವರ ಆ ಶೈಲಿ ಎಲ್ಲರಿಗೂ ಇಷ್ಟವಾಗುತ್ತದೆ.
ಬಿಗ್ ಮನೆಗೆ ಯಾರೇ ಬರಲಿ ಯಾರೇ ಹೊರಗಡೆ ಹೋಗ್ಲಿ. ಆದ್ರೆ ಆ ಮನೆಯಲ್ಲಿ ಯಾವಾಗ್ಲೂ ಒಬ್ಬರು ಇದ್ದೇ ಇರ್ತಾರೆ. ಅವರೇ ಕಿಚ್ಚ ಸುದೀಪ್. ಕಳೆದ ಏಳು ಸೀಸನ್ಗಳಲ್ಲಿಯೂ ಸುದೀಪ್ ಗೈಡ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ತಂಡಕ್ಕೆ ಒಳ್ಳೆ ಕ್ರಿಯೇಟಿವ್ ಐಡಿಯಾಗಳನ್ನು ಕೊಟ್ಟು, ಒಬ್ಬ ನಟನಾಗಿ, ನಿರ್ದೇಶಕನಾಗಿ ನಿಂತು ಈ ಶೋ ಚೆನ್ನಾಗಿ ಮೂಡಿ ಬರುಲು ಕಾರಣರಾಗಿದ್ದಾರೆ ಎಂದು ಗುಂಡ್ಕಲ್ ಹೇಳಿದ್ರು. ಇದೇ ವೇಳೆ ತಮ್ಮ ಬಗ್ಗೆಯೂ ಹೇಳಿಕೊಂಡ ಅವರು, ಸುದೀಪ್ ಬಿಟ್ಟರೆ ಎರಡನೇ ಮೋಸ್ಟ್ ಸೀನಿಯರ್ ನಾನೇ ಅಂದ್ರು.