ಕರ್ನಾಟಕ

karnataka

ETV Bharat / sitara

'ಕಿಚ್ಚ'ನ ವಿಕ್ರಾಂತ್ ರೋಣ ಲುಕ್ ರಿವೀಲ್: ನಿರ್ದೇಶಕ ಅನೂಪ್ ಭಂಡಾರಿಯಿಂದ ಮುಹೂರ್ತ ಫಿಕ್ಸ್​ - ಕಿಚ್ಚ ಸುದೀಪ್

ನಾಳೆ ಸುದೀಪ್​ ಅಭಿನಯದ 'ಫ್ಯಾಂಟಮ್' ಚಿತ್ರದ ವಿಕ್ರಾಂತ್ ರೋಣ (ಸುದೀಪ್​ ಪಾತ್ರ) ಲುಕ್ ರಿವೀಲ್ ಮಾಡಲಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

ಫ್ಯಾಂಟಮ್ ಚಿತ್ರ ತಂಡ
ಫ್ಯಾಂಟಮ್ ಚಿತ್ರ ತಂಡ

By

Published : Aug 9, 2020, 3:16 PM IST

'ಅಭಿನಯ ಚಕ್ರವರ್ತಿ' ಅಭಿಮಾನಿಗಳಿಗೆ 'ಫ್ಯಾಂಟಮ್' ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ಕಳೆದ ನಾಲ್ಕೈದು ತಿಂಗಳಿಂದ ಮನರಂಜನೆ ಇಲ್ಲದೆ ಕೊರೊನಾ ಭಯದಲ್ಲಿದ್ದ ಕಿಚ್ಚ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡೋಕೆ ಫ್ಯಾಂಟಮ್ ಟೀಂ ರೆಡಿಯಾಗಿದೆ.

ಫ್ಯಾಂಟಮ್ ಚಿತ್ರ ತಂಡ

ನಾಳೆ ಸುದೀಪ್​ ಅಭಿನಯದ ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣ (ಸುದೀಪ್​ ಪಾತ್ರ) ಲುಕ್ ರಿವೀಲ್ ಮಾಡಲು ನಿರ್ದೇಶಕ ಅನೂಪ್ ಭಂಡಾರಿ ನಿರ್ಧರಿಸಿದ್ದಾರೆ. ಫ್ಯಾಂಟಮ್ ಚಿತ್ರದ ಎಲ್ಲಾ ಪಾತ್ರಗಳ ಕ್ಯಾರೆಕ್ಟರ್ ಇಂಟರ್ ಫೋಸ್ಟರ್ ಪ್ರದರ್ಶನ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಈಗಾಗಲೇ ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿರುವ ಕಿಚ್ಚನ ವಿಕ್ರಾಂತ್ ರೋಣನ ಲುಕ್ ನಾಳೆ 10 ಗಂಟೆಗೆ ರಿವೀಲ್ ಆಗಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

ABOUT THE AUTHOR

...view details