ಕರ್ನಾಟಕ

karnataka

ETV Bharat / sitara

ಮತ್ತೆ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ ಕಂಗನಾ: 'ಪಂಗ' ಫಸ್ಟ್​​ ಲುಕ್​ ಔಟ್​​

ಕಂಗನಾ ರಣಾವತ್​​ ನಟನೆಯ 'ಪಂಗ' ಸಿನಿಮಾದ ಫಸ್ಟ್​​ ಲುಕ್​​ ರಿವೀಲ್​​ ಆಗಿದೆ. ಈ ಸಿನಿಮಾಕ್ಕೆ ಅಶ್ವಿನಿ ಲೈರ್​​ ತಿವಾರಿ ನಿರ್ದೇಶನವಿದ್ದು, ಚಿತ್ರದಲ್ಲಿ ಕಂಗನಾ ರಣಾವತ್​​ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

panga first look out
ಕಂಗನಾ

By

Published : Dec 19, 2019, 2:49 PM IST

ಬಾಲಿವುಡ್​​ ಬೋಲ್ಡ್​​ ತಾರೆ ಕಂಗನಾ ರಣಾವತ್​​ ನಟನೆಯ 'ಪಂಗ' ಸಿನಿಮಾದ ಫಸ್ಟ್​​ ಲುಕ್​​ ರಿವೀಲ್​​ ಆಗಿದೆ. 'ಜಡ್ಜ್​​​ಮೆಂಟಲ್​​​​ ಹೈನ್​​ ಕ್ಯಾ' ಸಿನಿಮಾದ ನಂತ್ರ ಕಂಗನಾ ನಟಿಸಿಸುತ್ತಿರುವ ಸಿನಿಮಾ ಇದು.

ಈ ಸಿನಿಮಾಕ್ಕೆ ಅಶ್ವಿನಿ ಲೈರ್​​ ತಿವಾರಿ ನಿರ್ದೇಶನವಿದ್ದು, ಚಿತ್ರದಲ್ಲಿ ಕಂಗನಾ ರಣಾವತ್​​ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಂಗನಾ ತಾಯಿಯಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಹಿಂದೆ ಮಣಿಕರ್ಣಿಕಾ ಸಿನಿಮಾದಲ್ಲೂ ಕಂಗನಾ ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ರು.

ಕಂಗನಾ ರಣಾವತ್​​

ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಫಸ್ಟ್​​ ಲುಕ್ ರಿವೀಲ್​ ಮಾಡಿರುವ ಕಂಗನಾ, ನನಗೆ ಮೊದಲು ತಾಯಿ ಪಾತ್ರ ನಿರ್ವಹಿಸಿ ಎಂದಾಗ ತುಂಬಾ ಅಪಮಾನವಾಗಿತ್ತು. ನಂತ್ರ ಮಣಿಕರ್ಣಿ ಸಿನಿಮಾ ಯಶಸ್ಸು ಕಂಡ ಮೇಲೆ ಮತ್ತೆ ತಾಯಿಯ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ರು.

ಈ ಹಿಂದೆ ಪಂಗಾ ಸಿನಿಮಾವನ್ನು ಡಿಸೆಂಬರ್​​ 23ಕ್ಕೆ ರಿಲೀಸ್​​ ಮಾಡುವುದಾಗಿ ಚಿತ್ರ ತಂಡ ತಿಳಿಸಿತ್ತು. ಇದೀಗ ರಿಲೀಸ್​​ ಡೇಟ್​ ಬದಲಾಗಿದ್ದು, ಬಿಡುಗಡೆ ದಿನಾಕವನ್ನು 2020ರ ಜನವರಿ 24 ನಿಗದಿ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ABOUT THE AUTHOR

...view details