ಕರ್ನಾಟಕ

karnataka

ETV Bharat / sitara

ಅಚ್ಚ ಕನ್ನಡದಲ್ಲಿ ಪೈಲ್ವಾನ್​ ಬೆಡಗಿಯಿಂದ ಸುನಿಲ್​ ಶೆಟ್ಟಿಗೆ ಬರ್ತ್​ಡೇ ವಿಶ್! - ಸುನಿಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಪೈಲ್ವಾನ್ ತಂಡದಿಂದ ವಿಶ್

ಪೈಲ್ವಾನ್ ನಾಯಕಿ ಆಕಾಂಕ್ಷ ಸಿಂಗ್ ಸುನಿಲ್​ ಶೆಟ್ಟಿಗೆ ಕನ್ನಡದಲ್ಲಿ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ. ರಾಜಸ್ಥಾನ ಮೂಲದ ಆಕಾಂಕ್ಷ ಸಿಂಗ್ ಕನ್ನಡದಲ್ಲಿ ವಿಶ್ ಮಾಡಿ ಕನ್ನಡತನ ಮೆರೆದಿದ್ದಾರೆ.

ಸುನಿಲ್​ ಶೆಟ್ಟಿ

By

Published : Aug 11, 2019, 2:56 PM IST

ಬಾಲಿವುಡ್​ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟ ಸುನಿಲ್ ಶೆಟ್ಟಿ ಇಂದು ತಮ್ಮ 57ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪೈಲ್ವಾನ್ ಚಿತ್ರತಂಡ ವಿಶೇಷವಾಗಿ ಶುಭಾಶಯ ಕೋರಿದೆ.

ಪೈಲ್ವಾನ್ ನಾಯಕಿ ಆಕಾಂಕ್ಷ ಸಿಂಗ್ ಸುನಿಲ್​ ಶೆಟ್ಟಿಗೆ ಕನ್ನಡದಲ್ಲಿ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ.

ಇನ್ನು ಚಿತ್ರದ ನಿರ್ದೇಶಕ ಕೃಷ್ಣ ಸಹ ತಮ್ಮ ಚಿತ್ರದ ನಟ ಸುನಿಲ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ. ಪೈಲ್ವಾನ್ ಚಿತ್ರದಲ್ಲಿ ಸುನಿಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದ ಮೂಲಕ ಸುನಿಲ್​​ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ.

ಕಿಚ್ಚ ಸುದೀಪ್​ ನಟನೆಯ ಪೈಲ್ವಾನ್​​ ಚಿತ್ರದಲ್ಲಿ ಆಕಾಂಕ್ಷ ಸಿಂಗ್​, ಸುನಿಲ್ ಶೆಟ್ಟಿ, ಕಬೀರ್ ಸಿಂಗ್​​, ಸುಶಾಂತ್ ಸಿಂಗ್ ಹಾಗೂ ಶರತ್ ಲೋಹಿತಾಶ್ವ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಸೆಪ್ಟೆಂಬರ್ 12ರಂದು ತೆರೆಗಪ್ಪಳಿಸಲಿದೆ.

ABOUT THE AUTHOR

...view details