ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕ್ರೇಜ್ ಜೋರಾಗಿದೆ. ಸೆಪ್ಟೆಂಬರ್ 12 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿರುವ ಈ ಸಿನಿಮಾ ನೋಡಲು ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಸದ್ಯ ಎಲ್ಲೆಡೆ ಈ ಚಿತ್ರದ ಹವಾ ಜೋರಾಗಿದ್ದು ಸುದೀಪ್ ಅಭಿಮಾನಿ ಚಂದ್ರು ತನ್ನ ಬೆನ್ನ ಮೇಲೆ ಪೈಲ್ವಾನ್ ಲುಕ್ ಬಿಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರದ ಈ ಅಭಿಮಾನಿಗೆ ಟ್ಯಾಟೂ ಕಲಾವಿದ ವಿನೋದ್ ಸತತ ಸುಮಾರು ಮೂರು ದಿನಗಳ ಕಾಲ ಈ ಹಚ್ಚೆ ಹಾಕಿದ್ದಾರೆ.
ಈಗಾಗಲೇ ಪೈಲ್ವಾನ್ ಚಿತ್ರದ ಹಾಡುಗಳು ಸಖತ್ ಸದ್ದು ಮಾಡ್ತಿದ್ದು, ಇಂದು ನಡೆಯಬೇಕಿದ್ದ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದೂಡಲಾಗಿದೆ. ಉತ್ತರ ಕರ್ನಾಟಕದ ಮಹಾಮಳೆ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಸುದೀಪ್, ಆಡಿಯೋ ಅನಾವರಣ ಕಾರ್ಯಕ್ರಮ ಮುಂದೂಡಿದ್ದಾರೆ.
ಪೈಲ್ವಾನ್ ಟ್ಯಾಟೂ ಬಿಡಿಸಿಕೊಂಡ ಸುದೀಪ್ ಅಭಿಮಾನಿ ಮುಂದಿನ ತಿಂಗಳು ತೆರೆ ಕಾಣುತ್ತಿರುವ ಬಹುಭಾಷಾ ಸಿನಿಮಾ 'ಪೈಲ್ವಾನ್' ಜ್ವರಾ ಜೋರಾಗಿದೆ. ಈ ಚಿತ್ರದ ಹೊಸ-ಹೊಸ ಲುಕ್ಗಳು ರಾರಾಜಿಸುತ್ತಿವೆ. ಈಗ ಪೈಲ್ವಾನ್ನಲ್ಲಿಯ ಸುದೀಪ್ ಲುಕ್ನ್ನು ಅಭಿಮಾನಿಯೋರ್ವ ತನ್ನ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.