ಕಿಚ್ಚ ಸುದೀಪ್ ಹಾಗೂ ಎಸ್. ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ‘ಪೈಲ್ವಾನ್’ ಸಿನಿಮಾ ಗುರುವಾರ ವಿಶ್ವದಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದು. ಕರ್ನಾಟಕದಲ್ಲೇ ಸುಮಾರು 400 ಸ್ಕ್ರೀನ್ ಗಳಲ್ಲಿ ಪೈಲ್ವಾನ್ ಪ್ರದರ್ಶನ ಕಂಡಿದೆ.
ಅಲ್ಲದೆ, ತಮಿಳಿನಲ್ಲಿ 150 ಸ್ಕ್ರೀನ್, ಮಲೆಯಾಳಂನಲ್ಲಿ 150 ಸ್ಕ್ರೀನ್ ಹಾಗೂ ತೆಲುಗಿನಲ್ಲಿ 150ಕ್ಕೂ ಹೆಚ್ಚಿನ ಸ್ಕ್ರೀನ್ಗಳಲ್ಲಿ ಪೈಲ್ವಾನ್ ತೊಡೆತಟ್ಟಿದ್ದಾನೆ. ಅಲ್ಲದೆ ವಿದೇಶದಲ್ಲೂ ಪೈಲ್ವಾನ್ ಅಬ್ಬರ ಜೋರಾಗಿದ್ದು, ತಮಿಳಿಗೆ ಡಬ್ ಆಗಿರುವ ಪೈಲ್ವನ್ ಯುಎಸ್ಎನಲ್ಲಿ 51 ಸ್ಕ್ರೀನ್ಗಳು, ಗಲ್ಫ್ನಲ್ಲಿ12 ಹಾಗೂ ಸಿಂಗಾಪುರದಲ್ಲಿ 21 ಸ್ಕ್ರೀನ್ಗಳಲ್ಲಿ ಪೈಲ್ವಾನ್ ಪ್ರದರ್ಶನಗೊಂಡಿದೆ.
ಅಲ್ಲದೆ ಕನ್ನಡದ ಪೈಲ್ವಾನ್ ಗಲ್ಫ್ನಲ್ಲಿ 51, ಸಿಂಗಾಪುರದಲ್ಲಿ 2 ಹಾಗೂ ಆಸ್ಟ್ರೇಲಿಯಾದಲ್ಲಿ 11 ಸ್ಕ್ರೀನ್ಗಳಲ್ಲಿ ಹಾಗೂ ಹಿಂದಿ ಭಾಷೆಯಲ್ಲಿ ಗಲ್ಫ್ನಲ್ಲಿ 53, ಸಿಂಗಾಪುರದಲ್ಲಿ2, ಆಸ್ಟ್ರೇಲಿಯಾದಲ್ಲಿ 7 ಸ್ಕ್ರೀನ್ ಗಳಲ್ಲಿ ಇದರ ಜೊತೆ ತೆಲುಗು ಭಾಷೆಯಲ್ಲಿ ಅಮೇರಿಕಾದಲ್ಲಿ 51 ಸ್ಕ್ರೀನ್ಗಳಲ್ಲಿ ಪೈಲ್ವಾನ್ ಚಿತ್ರ ರಿಲೀಸ್ ಆಗಿದೆ.
ಇನ್ನು ಇಂದು ಹಿಂದಿ ಭಾಷೆಯಲ್ಲೆ ಭಾರತದಾದ್ಯಂತ ಸುಮಾರು 2300 ಸ್ಕ್ರೀನ್ಗಳಲ್ಲಿ ಪೈಲ್ವಾನ್ ಚಿತ್ರ ರಿಲೀಸ್ ಅಗಲಿದೆ ಎಂದು ವಿತರಕ ಕಾರ್ತಿಕ್ ಈಗಾಗಲೇ ಹೇಳಿದ್ದಾರೆ. ಒಂದು ವೇಳೆ ನಾಳೆ 2300 ಸ್ಕ್ರೀನ್ಗಳಲ್ಲಿ ಪೈಲ್ವಾನ್ ಚಿತ್ರ ರಿಲೀಸ್ ಆದ್ರೆ ಹಿಂದಿಯಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆ ಪೈಲ್ವಾನ್ ಚಿತ್ರಕ್ಕೆ ಸಿಗಲಿದೆ.