ಸಿನಿಮಾ ನಟರ ಹುಟ್ಟುಹಬ್ಬಕ್ಕೆ ಅವರು ನಟಿಸಿರುವ ಚಿತ್ರದ ಟೀಸರ್ ಅಥವಾ ಸ್ಪೆಷಲ್ ಸಾಂಗ್ ಬಿಡುಗಡೆ ಮಾಡುವುದು ವಾಡಿಕೆ. ಅದರಂತೆ ಇಂದು ಸುದೀಪ್ ಹುಟ್ಟುಹಬ್ಬಕ್ಕಾಗಿ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ.
'ಪೈಲ್ವಾನ್' ಹುಟ್ಟುಹಬ್ಬಕ್ಕೆ ಚಿತ್ರತಂಡ ಬಿಡುಗಡೆ ಮಾಡ್ತು ಸ್ಪೆಷಲ್ ಸಾಂಗ್! - Abhinaya Chakravarthi
ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟಿದ ದಿನ. ಬಹುನಿರೀಕ್ಷಿತ 'ಪೈಲ್ವಾನ್' ಸಿನಿಮಾ ಈ ತಿಂಗಳು ಬಿಡುಗಡೆಯಾಗಲಿದೆ. ಸುದೀಪ್ ಬರ್ತಡೇ ವಿಶೇಷವಾಗಿ ಚಿತ್ರತಂಡ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಲಾದ ಹಾಡೊಂದನ್ನು ಬಿಡುಗಡೆ ಮಾಡಿದೆ.

ಸದ್ಯಕ್ಕೆ ಪೈಲ್ವಾನ್ ಆಗಿ ಅಬ್ಬರಿಸಲು ರೆಡಿಯಿರುವ ಕಿಚ್ಚನಿಗೆ, 'ಪೈಲ್ವಾನ್' ಚಿತ್ರತಂಡ ದುಬಾರಿ ಬೆಲೆಯ ಉಡುಗೊರೆ ನೀಡಿದೆ. ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಶೂಟಿಂಗ್ ಮಾಡಿರುವ ಚಿತ್ರದ ಹಾಡೊಂದನ್ನು ಕಿಚ್ಚನ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಕೃಷ್ಣ ಈ ಹಾಡನ್ನು ಮುಂಬೈನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಿಸಿದ್ದಾರೆ. ನೂರಾರು ಡ್ಯಾನ್ಸರ್ಗಳ ಜೊತೆ ಸುದೀಪ್ ಹಾಗೂ ಆಕಾಂಕ್ಷ ಸಿಂಗ್ ಮಸ್ತ್ ಸ್ಟೆಪ್ ಹಾಕಿದ್ದಾರೆ. ಈ ಹಾಡಿನಲ್ಲಿ ಸುದೀಪ್ ಡ್ಯಾನ್ಸ್ ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗಲಿದೆ. 'ಗಿರಗಿರ ತಿರುಗುತಿರುವ ಬುಗುರಿ ಕಣ್ಣೋಳೆ' ಎಂಬ ಈ ಹಾಡು ಸಿನಿಮಾ ಕೊನೆಯಲ್ಲಿ ಬರಲಿದೆ ಎಂದು ಚಿತ್ರತಂಡ ಹೇಳಿದೆ. ಈ ಹಾಡು ಅಭಿನಯ ಚಕ್ರವರ್ತಿ ಸಿನಿಮಾ ಕರಿಯರ್ನಲ್ಲಿ ಚಿತ್ರೀಕರಣವಾದ ದುಬಾರಿ ವೆಚ್ಚದ ಹಾಡು ಎನ್ನಲಾಗುತ್ತಿದೆ.