ಕರ್ನಾಟಕ

karnataka

ETV Bharat / sitara

ನೆರೆ ಸಂತ್ರಸ್ತರಿಗೆ ನೆರವಾದ ಯೋಧರಿಗೆ 'ಧೃವತಾರೆ' ಸಾಂಗ್ ಅರ್ಪಣೆ ! - ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸುಶಾಂತ್​ ಸಿಂಗ್, ಕಬೀರ್ ದುಹಾನ್ ಸಿಂಗ್ ಶರತ್​ ಲೋಹಿತಾಶ್ವ

ವಿ.ನಾಗೇಂದ್ರ ಪ್ರಸಾದ್​ ಬರೆದಿರುವ ಈ ಗೀತೆಗೆ ಅರ್ಮಾನ್ ಮಲ್ಲಿಕ್ ಧ್ವನಿಗೂಡಿಸಿದ್ದಾರೆ. ಅರ್ಜುನ್ ಜನ್ಯ ರಾಗ ಸಂಯೋಜನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

pailwan movie

By

Published : Aug 15, 2019, 11:49 AM IST

ಇದೇ 18 ರಂದು ಪೈಲ್ವಾನ್ ಚಿತ್ರದ ಆಡಿಯೋ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ಇಂದು ಈ ಚಿತ್ರದ 'ಧೃವತಾರೆ' ಮೆಲೋಡಿ ಸಾಂಗ್ ಹೊರಬಿದ್ದಿದೆ. ವಿ.ನಾಗೇಂದ್ರ ಪ್ರಸಾದ್​ ಬರೆದಿರುವ ಈ ಗೀತೆಗೆ ಅರ್ಮಾನ್ ಮಲ್ಲಿಕ್ ಧ್ವನಿಗೂಡಿಸಿದ್ದಾರೆ. ಅರ್ಜುನ್ ಜನ್ಯ ರಾಗ ಸಂಯೋಜನೆಯಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

ಇನ್ನು ಪೈಲ್ವಾನ್ ಚಿತ್ರದ ಈ ಹಾಡನ್ನು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದ ನೆರೆ ಸಂತ್ರಸ್ತರ ನೆರವಿಗೆ ಬಂದ ಧೃವತಾರೆಗಳಾದ ಭಾರತೀಯ ಸೇನೆ, ನೆರೆ ಪರಿಹಾರ ತಂಡಗಳು, ಸ್ವಯಂ ಸೇವಾ ಕಾರ್ಯಕರ್ತರು ಹಾಗೂ ಸಮಸ್ತ ನಾಗರಿಕರಿಗೆ ಸಮರ್ಪಿಸಿದೆ ಚಿತ್ರತಂಡ.

ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ಇವರಿಗೆ ನಾಯಕಿಯಾಗಿ ಅಕಾಂಕ್ಷಾ ಸಿಂಗ್​, ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸುಶಾಂತ್​ ಸಿಂಗ್, ಕಬೀರ್ ದುಹಾನ್ ಸಿಂಗ್ ಶರತ್​ ಲೋಹಿತಾಶ್ವ ಸೇರಿದಂತೆ ಸಾಕಷ್ಟು ಜನರು ನಟಿಸಿದ್ದಾರೆ. ಸೆಪ್ಟೆಂಬರ್ 12 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ABOUT THE AUTHOR

...view details