ಕರ್ನಾಟಕ

karnataka

ETV Bharat / sitara

'ಪೈಲ್ವಾನ್' ಫಸ್ಟ್​ ಸಾಂಗ್ ರಿಲೀಸ್​ಗೆ ಡೇಟ್​ ಫಿಕ್ಸ್​

ಕಿಚ್ಚ ಸುದೀಪ್ ಕುಸ್ತಿ ಪಟು, ಬಾಕ್ಸರ್ ಆಗಿ ನಟಿಸಿರುವ ಪೈಲ್ವಾನ್ ಚಿತ್ರದ ಮೊದಲ ಹಾಡು ನಾಳೆ ಬಿಡುಗಡೆಯಾಗಲಿದೆ.

ಪೈಲ್ವಾನ್

By

Published : Jul 10, 2019, 11:21 AM IST

ಪಂಚ ಭಾಷೆಗಳಲ್ಲಿ ಕುಸ್ತಿ ಆಡಲು ಬರುತ್ತಿರುವ 'ಪೈಲ್ವಾನ್'​​ನ ಹಾಡುಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ 27 ರಂದು ಪೈಲ್ವಾನ್ ಚಿತ್ರದ ಅದ್ಧೂರಿ ಆಡಿಯೋ ರಿಲೀಸ್​ಗೆ ಮುಹೂರ್ತ ಫಿಕ್ಸ್ ಆಗಿದೆ. ಕೋಟೆ ನಗರಿ ಚಿತ್ರದುರ್ಗದಲ್ಲಿ ಪೈಲ್ವಾನ್​ನ ಗಾನ ಬಜಾನಾ ಅನಾವರಣಗೊಳ್ಳಲಿದೆ. ಅದಕ್ಕೂ ಮುನ್ನ ಚಿತ್ರದ ಮೊದಲ ಹಾಡು ನಾಳೆಯೇ ಬಿಡುಗಡೆಯಾಗುತ್ತಿದೆ.

ಚಿತ್ರದ 'ಬಂದ ನೋಡು ಪೈಲ್ವಾನ್' ಥೀಮ್ ಸಾಂಗ್ ನಾಳೆ ಸಂಜೆ 6.30 ಕ್ಕೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನಲ್​​ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೃಷ್ಣ ಹೇಳಿದ್ದಾರೆ. ಏಕಕಾಲದಲ್ಲೇ ಐದು ಭಾಷೆಗಳಲ್ಲಿರುವ ಈ ಹಾಡು ರಿಲೀಸ್ ಆಗಲಿದೆ.

ಮ್ಯೂಸಿಕ ಮಾಂತ್ರಿಕ ಅರ್ಜುನ್ ಜನ್ಯ ಅವರ ಕೈಚಳಕದಲ್ಲಿ ಮೂಡಿ ಬಂದಿರುವ ಹಾಡುಗಳ ಮೇಲೆ ಭಾರಿ ನಿರೀಕ್ಷೆ ಇದೆ. ಅಭಿಮಾನಿಗಳ ನಿರೀಕ್ಷೆ ತಣಿಸಲು ನಾಳೆ ಪೈಲ್ವಾನ್ ಬರುತ್ತಿದ್ದಾರೆ.

ABOUT THE AUTHOR

...view details