ಕಿಚ್ಚ ಸುದೀಪ್ ಪೈಲ್ವಾನ್ ಆಗಿ ತೊಡೆ ತಟ್ಟಿದ್ದಕ್ಕೂ ಸಾರ್ಥಕ ಆಯಿತು. ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನ ಕೃಷ್ಣ ಅವರ ಪ್ರಯತ್ನ ಸಫಲವಾಯಿತು. ಯಾಕಂದ್ರೆ ಪೈಲ್ವಾನ್ ಸಿನಿಮಾ ಸುಮಾರು 4000 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಅಲ್ಲದೆ ಬಿಡುಗಡೆಯಾದ ನಾಲ್ಕು ದಿನಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಂದ 40 ಕೋಟಿ ಬಾಚಿದೆ ಎಂಬ ಸುದ್ದಿ ಹರಿದಾಡುತ್ತಿದೆ.
'ಪೈಲ್ವಾನ್' ತೊಡೆ ತಟ್ಟಿದ ಕೇವಲ ನಾಲ್ಕು ದಿನಕ್ಕೆ ಬಾಚಿದ್ದು ಇಷ್ಟು ಕೋಟಿಯಂತೆ! - ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ
ಪೈಲ್ವಾನ್ ಸಿನಿಮಾ ಸುಮಾರು 4000 ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಅಲ್ಲದೆ ಬಿಡುಗಡೆಯಾದ ನಾಲ್ಕು ದಿನಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಂದ 40 ಕೋಟಿ ಬಾಚಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಪೈಲ್ವಾನ್ ಪೋಸ್ಟರ್
ಈ ಬಗ್ಗೆ ಕಿಚ್ಚ ಸುದೀಪ್ ಸಂತೋಷದಿಂದ ಟ್ವೀಟ್ನಲ್ಲಿ ಧನ್ಯವಾದ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾವನ್ನು ಯಾರ್ಯಾರು ಟೀಕಿಸಿದರೋ ಅವರಿಗೆ ಧನ್ಯವಾದ ಹೇಳಿ, ಇಂತಹ ಟೀಕೆಗಳಿಂದ ಬೆಳೆಯಲು ಸಾಧ್ಯ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 12ರಂದು ಬಿಡುಗಡೆಯಾದ ‘ಪೈಲ್ವಾನ್’ ಮಲ್ಟಿಪ್ಲೆಕ್ಸ್ ಪರದೆಗಳಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದೆ.
ಎರಡನೇ ವಾರಕ್ಕೆ ವಿದೇಶಗಳಲ್ಲೂ ಸಹ ‘ಪೈಲ್ವಾನ್’ ದಾಪುಗಾಲು ಇಡಲಿದ್ದಾನೆ ಎಂದು ತಿಳಿದು ಬಂದಿದೆ. ಕೆಆರ್ಜಿ ಸ್ಟುಡಿಯೋ (ಕೆಜಿಎಫ್ ತಂಡ) ಈ ಚಿತ್ರವನ್ನು ಬಿಡುಗಡೆ ಮಾಡಿದೆ.