ಕರ್ನಾಟಕ

karnataka

ETV Bharat / sitara

ಪೈಲ್ವಾನ್ ಚಿತ್ರದ ಪೈರಸಿ: ಚಿತ್ರತಂಡದಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು - Complaint

ಪೈಲ್ವಾನ್ ಚಿತ್ರ ‌‌ಸೆ. 12 ರಂದು ಪಂಚಭಾಷೆಗಳಲ್ಲಿ ತೆರೆಕಂಡಿದೆ. ಆದರೆ, ಚಿತ್ರ ಬಿಡುಗಡೆಯ ದಿನವೇ ಎಲ್ಲಾ ಕಡೆ ಪೈರಸಿಯಾಗಿತ್ತು. ಹೀಗಾಗಿ ದುಷ್ಕರ್ಮಿಗಳ ವಿರುದ್ಧ ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ದೂರು ದಾಖಲಿಸಿದ್ದಾರೆ.

ಪೈಲ್ವಾನ್ ಚಿತ್ರದ ಪೈರಸಿ: ಚಿತ್ರತಂಡದಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

By

Published : Sep 16, 2019, 4:42 PM IST

Updated : Sep 16, 2019, 4:57 PM IST

ಪೈಲ್ವಾನ್ ಚಿತ್ರ ಬಿಡುಗಡೆಯ ದಿನವೇ ಪೈರಸಿಯಾಗಿತ್ತು ಎಂದು ನಿರ್ಮಾಪಕಿ ಸ್ವಪ್ನಕೃಷ್ಣ ನಗರ ಪೊಲೀಸ್ ಆಯುಕ್ತ ಕಚೇರಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ಪೈಲ್ವಾನ್ ಚಿತ್ರದ ಪೈರಸಿ: ಚಿತ್ರತಂಡದಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ಪೈಲ್ವಾನ್ ಚಿತ್ರ ‌‌ಕಳೆದ 12 ರಂದು ಪಂಚಭಾಷೆಗಳಲ್ಲಿ 3 ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ತೆರೆಕಂಡಿತ್ತು. ಆದರೆ, ಚಿತ್ರ ಬಿಡುಗಡೆಯ ದಿನವೇ ಎಲ್ಲಾ ಕಡೆ ಪೈರಸಿಯಾಗಿತ್ತು. ಹೀಗಾಗಿ ದುಷ್ಕರ್ಮಿಗಳ ವಿರುದ್ಧ ಇದೀಗ ದೂರು ದಾಖಲಾಗಿದೆ.

ಇನ್ನು ಚಿತ್ರದ ನಿರ್ಮಾಪಕಿ ಸ್ವಪ್ನಕೃಷ್ಣ ಮಾಧ್ಯಮದವರ ಜೊತೆ ಮಾತಾನಾಡಿ, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾವನ್ನ ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಇಂದು ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3500 ಕ್ಕೂ ಹೆಚ್ಚು ಲಿಂಕ್​ಗಳನ್ನ ಪೊಲೀಸರಿಗೆ ನೀಡಿದ್ದಿವಿ. ಇದನ್ನ ಯಾರು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ದರ್ಶನ್ ಅಭಿಮಾನಿಗಳು ಸಿನಿಮಾವನ್ನ ಪೈರಸಿ ಮಾಡಿದ್ದಾರೆಂದು ನಾನು ಹೇಳುವುದಿಲ್ಲ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದ್ರು ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಅನ್ನೋದು ಮಾರಕವಾಗಿದೆ ಎಂದರು.

Last Updated : Sep 16, 2019, 4:57 PM IST

ABOUT THE AUTHOR

...view details