ಕರ್ನಾಟಕ

karnataka

ETV Bharat / sitara

'ಪೈಲ್ವಾನ್' ಫಸ್ಟ್​​ ಲುಕ್ ರಿಲೀಸ್‌​:ರಗಡ್‌ ಲುಕ್​ನಲ್ಲಿ ಸುನೀಲ್ ಶೆಟ್ಟಿ ಮಿಂಚು - ಪೈಲ್ವಾನ್ ಅಡ್ಡದಲ್ಲಿ ಸರ್ಕಾರ್ ಸುನೀಲ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ಹಾಗೂ ಟೀಸರ್ ನಿಂದಲೇ ಸಿಕ್ಕಾಪಟ್ಟೇ ಸೌಂಡ್ ಮಾಡ್ತಿರೋ ಚಿತ್ರ ಪೈಲ್ವಾನ್. ಕಿಚ್ಚ ಸುದೀಪ್ ಫಸ್ಟ್ ಟೈಮ್ ಕುಸ್ತಿ ಪೈಲ್ವಾನ್ ಆಗಿ ಕಾಣಿಸಿಕೊಳ್ಳುತ್ತಿರುವ, ಪೈಲಾನ್' ಸಿನಿಮಾದ ಬಹು ಮುಖ್ಯ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಪೈಲ್ವಾನ್ ಸಿನಿಮಾದ ಫಸ್ಟ್​​ ಲುಕ್​​​

By

Published : May 22, 2019, 11:27 PM IST

ಕಿಚ್ಚ ಸುದೀಪ್‌ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೈಲಾನ್‌ ಗ್ಯಾಂಗ್‌ನಲ್ಲಿರೋ ಪೋಸ್ಟರ್ ಇದಾಗಿದ್ದು, ಈ ಪಾತ್ರವನ್ನು ಸುನೀಲ್ ಶೆಟ್ಟಿ ನಿರ್ವಹಿಸಿದ್ದಾರೆ.

ಬಿಳಿ ಪಂಚೆ ಹಾಗೂ ಬಿಳಿ ಅಂಗಿ ತೊಟ್ಟು ರಗಡ್‌ ಲುಕ್‌ನಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಶೇಷ ಅಂದರೆ, ಇದು ಸುನೀಲ್ ಶೆಟ್ಟಿ ನಟನೆಯ ಮೊದಲ ಕನ್ನಡ ಸಿನಿಮಾವಾಗಿದೆ.ಮೂಲತಃ ಕರ್ನಾಟಕದವರಾಗಿರುವ ಸುನೀಲ್ ಶೆಟ್ಟಿ ಬಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಸುದೀಪ್ ಈ ಸಿನಿಮಾಗಾಗಿ ಅವರನ್ನು ಕನ್ನಡಕ್ಕೆ ಕರೆ ತಂದಿದ್ದಾರೆ.

ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್​​ ತಾರೆ ಸುನಿಲ್​ ಶೆಟ್ಟಿಯವರ ರಗಡ್‌ ಲುಕ್​​​ ​​

ಅಕಾಂಕ್ಷ ಸಿಂಗ್ ಸಿನಿಮಾದ ನಾಯಕಿಯಾಗಿದ್ದು, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. 'ಹೆಬ್ಬುಲಿ' ನಂತರ ಕೃಷ್ಣ, ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸದ್ಯ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಮಾಡುತ್ತಿದೆ.

For All Latest Updates

TAGGED:

ABOUT THE AUTHOR

...view details