ಕರ್ನಾಟಕ

karnataka

ETV Bharat / sitara

ಪದ್ಮಜಾ ರಾವ್ ಅವ್ರಿಗೆ ಕಾಸ್ಟ್ಯೂಮ್ ಡಿಸೈನರ್ ಆಗೋದಿಕ್ಕೆ ಇವ್ರೇ ಸ್ಫೂರ್ತಿ! - ಪದ್ಮಜಾ ರಾವ್ ನಟಿ

ಪದ್ಮಜಾ ರಾವ್ ತಮ್ಮ ನಟನೆಯಿಂದ ಎಲ್ಲರ ಮನಸೆಳೆದಿದ್ದು, ಇದೀಗ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅದಲ್ಲದೇ ಕಾಸ್ಟ್ಯೂಮ್ ಡಿಸೈನರ್ ಆಗಬೇಕೆಂಬ ಆಸೆಯನ್ನು ಈಗ ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದಾರೆ.

ನಟಿ, ಪದ್ಮಜಾ ರಾವ್​

By

Published : Jul 31, 2019, 10:37 PM IST

Updated : Jul 31, 2019, 10:46 PM IST

ಪದ್ಮಜಾ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಕಿರುತೆರೆ ನಿರ್ದೇಶಕಿ. ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕರು ಮತ್ತು ಕಿರುತೆರೆ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿರುವ ಪದ್ಮಜಾ ರಾವ್‌, ನಟನೆ, ನಿರ್ದೇಶನ ಮಾಡಿದ್ದಲ್ಲದೆ, ನಿರ್ಮಾಪಕಿಯಾಗಿದ್ದಾರೆ. ಇದೀಗ ಪದ್ಮಜಾ ಕಾಸ್ಟ್ಯೂಮ್ ಡಿಸೈನರ್ ಆಗಿದ್ದು, ಇದಕ್ಕೆ ಸ್ಫೂರ್ತಿ ಯಾರೆಂಬುದನ್ನು ರಿವೀಲ್​ ಮಾಡಿದ್ದಾರೆ.

ನಟಿ, ಪದ್ಮಜಾ ರಾವ್​

ವೈಶಾಲಿ ಕಾಸರವಳ್ಳಿಯವರ ಮೂಡಲ ಮನೆ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಮುಖ್ಯಭೂಮಿಕೆಗೆ ಪದ್ಮಜಾ ರಾವ್ ಬಂದರು. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಪೋಷಕ ನಟಿಯಾಗಿ ಮಿಂಚಿದವರು. ಇದೀಗ ಪದ್ಮಜಾ ರಾವ್ ಬಹು ದಿನದ ಆಸೆಯನ್ನ ರಿಲೀಸ್​​ಗೆ ರೆಡಿಯಾಗಿರೋ ಸವರ್ಣದೀರ್ಘ ಸಂಧಿ ಚಿತ್ರದಲ್ಲಿ ಈಡೇರಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಪದ್ಮಜಾ ರಾವ್ ಕಾಸ್ಟ್ಯೂಮ್ ಡಿಸೈನರ್ ಆಗಿ ಹೊರ ಹೊಮ್ಮಿದ್ದು, ಪದ್ಮಜಾ ರಾವ್ ಅವ್ರಿಗೆ ಕಾಸ್ಟ್ಯೂಮ್ ಡಿಸೈನರ್​ ಆಗೋದಿಕ್ಕೆ ಸ್ಫೂರ್ತಿ ವೈಶಾಲಿ ಕಾಸರವಳ್ಳಿ ಎಂದು ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾ ಮೂಲಕ ಲೈಮ್ ಲೈಟಿಗೆ ಬಂದ ಪದ್ಮಜಾ ರಾವ್ ಸದ್ಯ ಈಗ ನಿರ್ಮಾಪಕಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ಆಗಿ ಹೊರ ಹೊಮ್ಮಿದ್ದಾರೆ.

Last Updated : Jul 31, 2019, 10:46 PM IST

ABOUT THE AUTHOR

...view details