ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ ಅರಮನೆ ಗಿಳಿ ಧಾರಾವಾಹಿಯಲ್ಲಿ ಇಷ್ಟು ದಿನಗಳ ಕಾಲ ವೀಕ್ಷಕರನ್ನು ಕಾಡುತ್ತಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಧಾರಾವಾಹಿ ಆರಂಭವಾದಾಗಿನಿಂದಲೂ ಒಬ್ಬ ಹೆಂಗಸು ಕತ್ತಲೆ ಕೋಣೆಯಲ್ಲಿ ವಾಸ ಇರುವ ದೃಶ್ಯ ಆಗಾಗ ತೋರಿಸಿತ್ತಿದ್ದರು. ಮಾತ್ರವಲ್ಲದೆ ಧಾರಾವಾಹಿಯ ಖಳನಾಯಕಿ ದುರ್ಗಾ ಅವಳನ್ನು ಮಾತನಾಡಿಸುತ್ತಿದ್ದಳು. ಆದರೆ ಅವಳು ಯಾರು ಎಂಬ ವಿಚಾರ ವೀಕ್ಷಕರಿಗೆ ತಿಳಿದಿರಲಿಲ್ಲ.
ಅರಮನೆ ಗಿಳಿ ಧಾರಾವಾಹಿಯಲ್ಲಿ ಕತ್ತಲೆ ಕೋಣೆಯಲ್ಲಿರುವವರು ಯಾರು ಗೊತ್ತೇ!? - ನಟಿ ಪದ್ಮಜಾ ರಾವ್
ಅರಮನೆ ಗಿಳಿ ಧಾರಾವಾಹಿಯಲ್ಲಿ ಮೀನಾಕ್ಷಿಯಾಗಿ ನಟಿಸುತ್ತಿರುವ ಪದ್ಮಜಾ ರಾವ್ ಅವರೇ ಕಾಮಾಕ್ಷಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದರೆ ಪದ್ಮಜಾ ಅವರು ಅರಮನೆ ಗಿಳಿಯಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
![ಅರಮನೆ ಗಿಳಿ ಧಾರಾವಾಹಿಯಲ್ಲಿ ಕತ್ತಲೆ ಕೋಣೆಯಲ್ಲಿರುವವರು ಯಾರು ಗೊತ್ತೇ!? padmaja rao double role in aramanegili_](https://etvbharatimages.akamaized.net/etvbharat/prod-images/768-512-5346798-thumbnail-3x2-giri.jpg)
ಇದೀಗ ಅದಕ್ಕೆ ಉತ್ತರ ದೊರಕಿದೆ. ಕತ್ತಲ ಕೋಣೆಯಲ್ಲಿ ಇದ್ದದ್ದು ಬೇರಾರೂ ಅಲ್ಲ, ಮೀನಾಕ್ಷಮ್ಮನ ಸಹೋದರಿ ಕಾಮಾಕ್ಷಿ. ಊರಿನ ಜನತೆಯೇ ಮೆಚ್ಚುವ ಮೀನಾಕ್ಷಿಯನ್ನು ಕಂಡರೆ ಕಾಮಾಕ್ಷಿಗೆ ಆಗುವುದಿಲ್ಲ. ಅದರ ಹಿಂದೆ ಏನು ಕಾರಣವಿದೆ ಎಂಬುದೆಲ್ಲಾ ತಿಳಿಯಬೇಕಷ್ಟೇ. ಆದರೆ ಮೀನಾಕ್ಷಿಯಾಗಿ ನಟಿಸುತ್ತಿರುವ ಪದ್ಮಜಾ ರಾವ್ ಅವರೇ ಕಾಮಾಕ್ಷಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಂದರೆ ಪದ್ಮಜಾ ಅವರು ಅರಮನೆ ಗಿಳಿಯಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಮೂಡಲ ಮನೆಯ ಶಕ್ಕು ಬಾಯಿ ಆಗಿ ಕಿರುತೆರೆಯಲ್ಲಿ ಮನೆ ಮಾತಾಗಿರುವ ಪದ್ಮಜಾ ರಾವ್, ಬೆಂಕಿಯಲ್ಲಿ ಅರಳಿದ ಹೂವು ಎಂಬ ಧಾರಾವಾಹಿ ನಿರ್ದೇಶಿಸಿದ್ದಾರೆ. ಈಗಾಗಲೇ ಬೆಳ್ಳಿತೆರೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ಇವರು, ಇದೀಗ ಕಿರುತೆರೆಯ ಮೀನಾಕ್ಷಿ-ಕಾಮಾಕ್ಷಿಯಾಗಿ ಬ್ಯುಸಿಯಾಗಿದ್ದಾರೆ.