ಕರ್ನಾಟಕ

karnataka

ETV Bharat / sitara

ಓಟಿಟಿ ಪ್ಲಾಟ್​​​​ಫಾರ್ಮ್ ಪಾಲಾಗಲಿದ್ಯಾ ಕೆಜಿಎಫ್​​​​ 2, ರಾಬರ್ಟ್​ ಚಿತ್ರಗಳು...? - OTT platform offered 120 crore to KGF 2

ಲಾಕ್​​ಡೌನ್​​​ನನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವ ಓಟಿಟಿ ಪ್ಲಾಟ್​​​ಫಾರ್ಮ್​ಗಳು ಇದೀಗ ದರ್ಶನ್ ಅಭಿನಯದ 'ರಾಬರ್ಟ್'​ ಹಾಗೂ ಯಶ್ ಅಭಿನಯದ 'ಕೆಜಿಎಫ್' ಚಿತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಯತ್ನಿಸಿದೆ.

Amazon
ಅಮೆಜಾನ್ ಪ್ರೈಂ

By

Published : May 21, 2020, 12:12 AM IST

ಕೊರೊನಾ ಲಾಕ್​​ಡೌನ್ ಮುಗಿದಾಗ ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್​​​​​ಗೆ ಬರುತ್ತಾರೋ ಇಲ್ಲವೋ ಎಂದು ಚಿಂತಿಸುವಾಗ ಈ ಸಮಯವನ್ನು ಉಪಯೋಗ ಮಾಡಿಕೊಳ್ಳುತ್ತಿರುವುದು ಓಟಿಟಿ ಪ್ಲಾಟ್​​​​​ಫಾರ್ಮ್​ಗಳು.

ದರ್ಶನ್

ಪಿಆರ್​​​​ಕೆ ಪ್ರೊಡಕ್ಷನ್ ಸಿನಿಮಾಗಳಾದ ‘ಲಾ’ ಹಾಗೂ ‘ಫ್ರೆಂಚ್ ಬಿರ್ಯಾನಿ’ಚಿತ್ರಗಳನ್ನು ಅಮೆಜಾನ್ ಪ್ರೈಮ್​​​ನವರು ಖರೀದಿಸಿ ಪ್ರಸಾರ ಮಾಡಲು ದಿನಾಂಕ ಕೂಡಾ ನಿಗದಿ ಮಾಡಿಕೊಂಡಿದೆ. ಈಗ ಅಮೆಜಾನ್​​​​ ಬಹುಕೋಟಿ ನಿರ್ಮಾಣದ 'ಕೆಜಿಎಫ್​​​​​ 2' ಹಾಗೂ 'ರಾಬರ್ಟ್'​ ಚಿತ್ರಗಳಿಗೆ ಆಹ್ವಾನ ನೀಡಿದೆ. ಯಶ್ ಅಭಿನಯದ 'ಕೆಜಿಎಫ್​​​​​ 2' ಚಿತ್ರಕ್ಕೆ 120 ಕೋಟಿ ರೂಪಾಯಿ ಹಾಗೂ ದರ್ಶನ್ ಅಭಿನಯದ 'ರಾಬರ್ಟ್'​ ಚಿತ್ರಕ್ಕೆ 70 ಕೋಟಿ ರೂಪಾಯಿ ಆಹ್ವಾನ ನೀಡಿದೆ.

ಉಮಾಪತಿ

ಆದರೆ 'ರಾಬರ್ಟ್' ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು 70 ಕೋಟಿಗೆ ಚಿತ್ರವನ್ನು ಓಟಿಟಿಗೆ ನೀಡುವುದನ್ನು ತಿರಸ್ಕರಿಸಿದ್ದಾರೆ. ಈ ಹಿಂದೆ ಜೇಕಬ್ ವರ್ಗೀಸ್ ‘ಚಂಬಲ್’ ಸಿನಿಮಾ ಸಮಯದಲ್ಲಿ ಹೇಳಿದಂತೆ ನನ್ನ ಸಿನಿಮಾ ಮಾಡಿರುವುದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕ ನೋಡಲು ಎಂದು ಉಮಾಪತಿ ಹೇಳಿದ್ದಾರೆ. ಓಟಿಟಿ ಪ್ಲಾಟ್​​​​ಫಾರ್ಮ್ 'ರಾಬರ್ಟ್' ಚಿತ್ರಕ್ಕೆ ಹಾಕಿದ ಬಂಡವಾಳಕ್ಕಿಂತ ಎರಡರಷ್ಟು ಹಣ ನೀಡಲು ಮುಂದಾಗಿದೆ. ಆದರೆ ಉಮಾಪತಿ ಇದಕ್ಕೆ ಬಿಲ್​​​​ಕುಲ್ ಒಪ್ಪುತ್ತಿಲ್ಲ.

ಯಶ್

ಇನ್ನು 'ಕೆಜಿಎಫ್​-2' ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ಬ್ಯಾನರ್​​ನ ವಿಜಯ್ ಕಿರಂಗದೂರು ಕೂಡಾ 120 ಕೋಟಿ ಹಣವನ್ನು ನಿರಾಕರಿಸಿದ್ದಾರೆ. ಅದಕ್ಕೆ ಪ್ರಮುಖ ಕಾರಣವೆಂದರೆ ಕೆಜಿಎಫ್ ಮೊದಲ ಭಾಗ 400 ಕೋಟಿಗೂ ಹೆಚ್ಚು ಲಾಭ ಮಾಡಿತ್ತು. ಆದರೆ ಓಟಿಟಿ ಪ್ಲಾಟ್​​ಫಾರ್ಮ್​ ಆ ಹಣದಲ್ಲಿ ಅರ್ಧ ಹಣವನ್ನೂ ಕೂಡಾ ಆಫರ್ ಮಾಡುತ್ತಿಲ್ಲ.

ವಿಜಯ್ ಕಿರಂಗದೂರು

ಒಟ್ಟಿನಲ್ಲಿ ತಯಾರಾಗುವ ಸಿನಿಮಾಗಳನ್ನೆಲ್ಲಾ ಓಟಿಟಿ ಪ್ಲಾಟ್​​​​​​ಫಾರ್ಮ್​ಗೆ ನೀಡಿದರೆ ಚಿತ್ರಮಂದಿರ ಮಾಲೀಕರ ಪರಿಸ್ಥಿತಿ ಏನಾಗಬೇಡ..? ಇದನ್ನು ನಿರ್ಮಾಪಕರು ಅರ್ಥ ಮಾಡಿಕೊಂಡರೆ ಒಳ್ಳೆಯದು.

For All Latest Updates

TAGGED:

ABOUT THE AUTHOR

...view details