ಕನ್ನಡ ಚಿತ್ರರಂಗದ ಹೈ ವೋಲ್ಟೇಜ್ ಹೀರೋ ಎಂದೇ ಬ್ರಾಂಡ್ ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಟನೆ, ಕಿಕ್ ಕೊಡುವ ಡ್ಯಾನ್ಸ್, ಆ್ಯಕ್ಷನ್ ನೋಡಿ ಮನಸೋಲದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರಗೆ ಪುನೀತ್ ಅವರಿಗೆ ಅಭಿಮಾನಿಗಳಿದ್ದಾರೆ.
ಪವರ್ ಸ್ಟಾರ್ ಜೊತೆ ನಟಿಸಲು ಬಹುತೇಕ ಎಲ್ಲಾ ನಾಯಕಿಯರೂ ಕಾಯುತ್ತಿರುತ್ತಾರೆ. ಇದುವರೆಗೂ ಕನ್ನಡ ನಟಿಯರಿಗಿಂತ ಪರಭಾಷೆ ನಟಿಯರೇ ಪುನೀತ್ ಜೊತೆ ಸಿನಿಮಾಗಳಲ್ಲಿ ಡ್ಯೂಯೆಟ್ ಹಾಡಿದ್ದಾರೆ. ಆ ಚೆಲುವೆಯರ ಬಗ್ಗೆ ಒಂದಿಷ್ಟು ಮಾಹಿತಿ.
ಬಾಲನಟನಾಗಿರುವಾಲೇ ರಾಷ್ಟ್ರಪ್ರಶಸ್ತಿ ಪಡೆದಿದ್ದ ಪುನೀತ್ 2002 ರಲ್ಲಿ 'ಅಪ್ಪು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗಕ್ಕೆ ಮತ್ತೆ ವಾಪಸಾದರು. ಅಪ್ಪು ಚಿತ್ರದಲ್ಲಿ ಪುನೀತ್ ಜೊತೆ ರಕ್ಷಿತಾ ಮಿಂಚಿದ್ದರೆ, 'ಅಭಿ 'ಚಿತ್ರದಲ್ಲಿ ರಮ್ಯಾ ನಟಿಸಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಈ ಎರಡು ಚಿತ್ರಗಳ ಬಳಿಕ ಪುನೀತ್ ರಾಜ್‍ಕುಮಾರ್ ಬಹುತೇಕ ಚಿತ್ರಗಳಲ್ಲಿ, ಪರಭಾಷೆಯ ನಟಿಯರೇ ಇದ್ದಾರೆ. ಈ ಟ್ರೆಂಡ್ ಶುರುವಾಗಿದ್ದು 'ವೀರ ಕನ್ನಡಿಗ' ಚಿತ್ರದಿಂದ. ದ್ವಿ ಪಾತ್ರದಲ್ಲಿ ನಟಿಸಿದ್ದ ಪುನೀತ್ ರಾಜ್‍ಕುಮಾರ್ ಜೋಡಿಯಾಗಿ ಮುಂಬೈ ಬೆಡಗಿ ಅನಿತಾ ಮೆಹರ್ ರೊಮ್ಯಾನ್ಸ್ ಮಾಡಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ನಂತರ ಪುನೀತ್ ರಾಜ್‍ಕುಮಾರ್ ಬಾಕ್ಸರ್ ಆಗಿ ಕಾಣಿಸಿಕೊಂಡ ಸಿನಿಮಾ 'ಮೌರ್ಯ' ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡ್ಯೂಯೆಟ್ ಹಾಡುವ ಚಾನ್ಸ್ ಸಿಕ್ಕಿದ್ದು ಮಲಯಾಳಂ ಕುಟ್ಟಿ ಮೀರಾ ಜಾಸ್ಮಿನ್ಗೆ. ಪುನೀತ್ ರಾಜ್ ಕುಮಾರ್ ಹಾಗೂ ಮೀರಾ ಜಾಸ್ಮಿನ್ ಕೆಮಿಸ್ಟ್ರಿಗೆ ಸಿನಿಮಾ ಪ್ರಿಯರು ಬೋಲ್ಡ್ ಆದ್ರು. ಈ ಕಾರಣಕ್ಕೆ ಮತ್ತೆ 'ಅರಸು' ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಇನ್ನು 2005ರಲ್ಲಿ ತೆರೆ ಕಂಡ 'ನಮ್ಮ ಬಸವ' ಚಿತ್ರದಲ್ಲಿ ಬಸವನ ರಾಣಿಯಾಗಿ ಕಾಣಿಸಿಕೊಂಡಿದ್ದು ತೆಲುಗು ಚಿತ್ರಗಳಲ್ಲಿ ಮಿಂಚಿದ್ದ ಪಂಜಾಬಿ ಬೆಡಗಿ ಗೌರಿ ಮುಂಜಾಲ್ವೀರ.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ 2006ರಲ್ಲಿ ಪುನೀತ್ ಕಬಡ್ಡಿ ಆಟಗಾರನಾಗಿ ಅಬ್ಬರಿಸಿದ ಚಿತ್ರ 'ಅಜಯ್'. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ 'ಆರ್ಯ' ಸಿನಿಮಾದಲ್ಲಿನಟಿಸಿದ್ದ ಅನುರಾಧಾ ಮೆಹ್ತಾ ಪವರ್ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಇನ್ನು ಪುನೀತ್ ರಾಜ್‍ಕುಮಾರ್ ಸಿನಿಮಾ ಕೆರಿಯರ್ನಲ್ಲಿ ಒಂದು ವರ್ಷ ಪ್ರದರ್ಶನಗೊಂಡ ಚಿತ್ರ 'ಮಿಲನ'. ಈ ಚಿತ್ರದ ನಿರ್ದೇಶಕ ಪ್ರಕಾಶ್, ಪಾರ್ವತಿ ಮೆನನ್ ಎಂಬ ಮಲಯಾಳಿ ಬೆಡಗಿಯನ್ನು ಕರೆತಂದರು. ಇವರಿಬ್ಬರ ಕೆಮಿಸ್ಟ್ರಿ ಕೋಟ್ಯಾಂತರ ಅಭಿಮಾನಿಗಳಿಗೆ ಇಷ್ಟ ಆಯಿತ್ತು. ಹೀಗಾಗಿ 'ಪೃಥ್ವಿ' ಚಿತ್ರದಲ್ಲಿ ಮತ್ತೆ ಅಪ್ಪುಗೆ ಪಾರ್ವತಿ ಮೆನನ್ ಜೋಡಿಯಾಗಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಹೀಗೆ ಒಂದು ಸಿನಿಮಾದಲ್ಲಿ ಕನ್ನಡ ಹೀರೋಯಿನ್ ಆದ್ರೆ ಮತ್ತೊಂದು ಚಿತ್ರದಲ್ಲಿ ಪರಭಾಷೆಯ ನಟಿಯ ಆಗಮನ ಇದ್ದೇ ಇರುತ್ತಿತ್ತು. ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟಿಯಾಗಿದ್ದ ಹನ್ಸಿಕಾ ಮೋಟ್ವಾನಿ 'ಬಿಂದಾಸ್' ಚಿತ್ರದಲ್ಲಿ ಪುನೀತ್ ಜೊತೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಇನ್ನು ಪವರ್ ಸ್ಟಾರ್ ಲಾಂಗ್ ಹಿಡಿದ ಚಿತ್ರ 'ವಂಶಿ'. ಈ ಚಿತ್ರಕ್ಕಾಗಿ ಬಾಂಬೆಯಿಂದ ನಿಖಿತಾ ತುಕ್ರಾಲ್ ಅವರನ್ನು ಕನ್ನಡಕ್ಕೆ ಕರೆ ತರಲಾಗಿತ್ತು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ 'ಹೇ ಪಾರು' ಅಂತಾ 'ರಾಜ್ ದಿ ಶೋ ಮ್ಯಾನ್' ಚಿತ್ರದಲ್ಲಿ ಸಖತ್ ಜೋಷ್ನಲ್ಲಿ ಪವರ್ ಸ್ಟಾರ್ ಡ್ಯಾನ್ಸ್ ಮಾಡಿದ್ದರು. ದಕ್ಷಿಣದ ನಟಿಯಾಗಿದ್ದ ನಿಶಾ ಕೊಠಾರಿ, ಪುನೀತ್ ರಾಜ್‍ಕುಮಾರ್ ಜೊತೆ ಈ ಚಿತ್ರದಲ್ಲಿ ಮಿಂಚಿದ್ದಾರೆ.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಬಹುತೇಕ ಭಾಗ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದ್ದ 'ನಿನ್ನಿಂದಲೇ' ಚಿತ್ರದಲ್ಲಿ ಈ ಅಣ್ಣಾಬಾಂಡ್ ಜೊತೆ ಎರಿಕಾ ಫರ್ನಾಂಡಿಸ್ ಎಂಬ ಪಂಜಾಬಿ ನಟಿ ರೊಮ್ಯಾನ್ಸ್ ಮಾಡಿದ್ರು. ಇದರೊಂದಿಗೆ 'ಪವರ್ ಸ್ಟಾರ್' ಎಂಬ ಚಿತ್ರದಲ್ಲಿ ತ್ರಿಶಾ ಅಪ್ಪು ಜೊತೆ ಡ್ಯೂಯೆಟ್ ಆಡಿದ್ದು ಮರೆಯಲು ಸಾಧ್ಯವಿಲ್ಲ.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಇನ್ನು ಪವರ್ ಸ್ಟಾರ್ ಜೊತೆ 'ಜಾಕಿ', 'ಯಾರೇ ಕೂಗಾಡಲಿ' ಹಾಗೂ 'ಮೈತ್ರಿ' ಮೂರೂ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಮಲಯಾಳಿ ಬೆಡಗಿ ಭಾವನ ಮೆನನ್. ಇವರಿಬ್ಬರ ಕೆಮಿಸ್ಟ್ರಿ ಕೂಡಾ ಬಹಳ ಚೆನ್ನಾಗಿ ವರ್ಕೌಟ್ ಆಗಿತ್ತು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಮಾಸ್ ಆ್ಯಂಡ್ ಕ್ಲಾಸ್ ಹೀರೋ ಆಗಿದ್ದ ಪುನೀತ್ ರಾಜ್‍ಕುಮಾರ್, 'ರಣವಿಕ್ರಮ' ಚಿತ್ರದಲ್ಲಿ ಖಾಕಿ ತೊಟ್ಟು ಪೊಲೀಸ್ ಆಗಿ ತೆರೆ ಮೇಲೆ ಅಬ್ಬರಿಸಿದ್ದರು. ಈ ರಣವಿಕ್ರಮನ ರಾಣಿಯರಾಗಿ ಅಂಜಲಿ ಹಾಗೂ ಅದಾ ಶರ್ಮ ಎಂಬ ದಕ್ಷಿಣ ಭಾರತದ ಸುಂದರಿಯರು ಜೊತೆಯಾಗಿದ್ದರು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ 'ರಾಜಕುಮಾರ' ಚಿತ್ರದಲ್ಲಿ ಪ್ರಿಯಾ ಆನಂದ್ ಅವರೊಂದಿಗೆ ಅಪ್ಪು ನಟಿಸಿದರು. ಇನ್ನು ಕಳೆದ ವರ್ಷ ತೆರೆ ಕಂಡ 'ನಟಸಾರ್ವಭೌಮ' ಚಿತ್ರದ ಇಬ್ಬರು ನಾಯಕಿಯರಲ್ಲಿ ಅಪ್ಪುಗೆ ಮಲಯಾಳಿ ಸುಂದರಿ ಅನುಪಮಾ ಪರಮೇಶ್ವರನ್ ಜೋಡಿಯಾಗಿದ್ರು. ಈ ಚಿತ್ರದಲ್ಲಿ ಇವರಿಬ್ಬರ ಜೋಡಿ ಚೆನ್ನಾಗಿ ಕ್ಲಿಕ್ ಆಗಿತ್ತು.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್ ಈಗ ಟೀಸರ್ನಿಂದಲೇ ಅಬ್ಬರಿಸಿರುವ 'ಯುವರತ್ನ' ಚಿತ್ರದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ ಮಿಂಚಿರುವ ಸಯೆಶಾ ಸೈಗಲ್ ಜೋಡಿಯಾಗಿದ್ದಾರೆ.
ಪುನೀತ್ ಜೊತೆ ಪರಭಾಷಾ ನಟಿಯರ ರೊಮ್ಯಾನ್ಸ್