ವಾಷಿಂಗ್ಟನ್ (ಯುಎಸ್): ವಿಶ್ವ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಮುಂಚೂಣಿಯಲ್ಲಿರುವ 'ಆಸ್ಕರ್ 2021' ಭವ್ಯ ಸಮಾರಂಭಕ್ಕೆ ಲಾಸ್ ಏಂಜಲೀಸ್ ಸಾಕ್ಷಿಯಾಯಿತು.
ಪ್ರಶಸ್ತಿ ಗೆದ್ದ ಸಾಧಕರು ಮತ್ತು ವಿಭಾಗ:
ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝಿಲ್ಲರ್ ಅವರು 'ದಿ ಫಾದರ್' ಎಂಬ ಸಿನಿಮಾಕ್ಕೆ ಉತ್ತಮ ಅಡಾಪ್ಟೆಡ್ ಚಿತ್ರಕಥೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದಾರೆ. ಚಿತ್ರದಲ್ಲಿ ಆಂಥೋನಿ ಹಾಪ್ಕಿನ್ಸ್ ನಾಯಕನಾಗಿ ನಟಿಸಿದ್ದರು. ಇದು ತಂದೆ-ಮಗಳ ಸಂಬಂಧ ಬಿಂಬಿಸುವ ಸಿನಿಮಾ.
ಇನ್ನು ಎಮಿರಾಲ್ಡ್ ಫೆನ್ನೆಲ್ ಅವರು ತಮ್ಮ ಕಾಮಿಡಿ ಸಿನಿಮಾ 'ಪ್ರಾಮಿಸಿಂಗ್ ಯಂಗ್ ವುಮೆನ್'ನಲ್ಲಿ ಉತ್ತಮ ಚಿತ್ರಕಥೆ ಬರೆದಿದ್ದಕ್ಕಾಗಿ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅತ್ಯಾಚಾರಕ್ಕೆ ಬಲಿಯಾದ ತನ್ನ ಸ್ನೇಹಿತೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುವ ಮಹಿಳೆಯಾಗಿ ಕ್ಯಾರಿ ಮುಲಿಗನ್ ನಟಿಸಿದ್ದಾರೆ. ಬೊ ಬರ್ನ್‌ಹ್ಯಾಮ್, ಅಲಿಸನ್ ಬ್ರೀ, ಕ್ಲಾನ್ಸಿ ಬ್ರೌನ್, ಜೆನ್ನಿಫರ್ ಕೂಲಿಡ್ಜ್, ಲಾವೆರ್ನೆ ಕಾಕ್ಸ್ ಮತ್ತು ಕೋನಿ ಬ್ರಿಟನ್ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಕ್ಲೋಯ್ ಝಾವೋ ಅವರು ತಮ್ಮ 'ನೋಮಾಡ್ಲ್ಯಾಂಡ್' ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ 60 ವರ್ಷದ ಮಹಿಳೆಯು ಎಲ್ಲವನ್ನೂ ಕಳೆದುಕೊಂಡ ನಂತರ, ಅಮೆರಿಕಾದ ಪಶ್ಚಿಮಕ್ಕೆ ಪ್ರಯಾಣವನ್ನು ಪ್ರಾರಂಭಿಸುತ್ತಾಳೆ. ಬಳಿಕ ವ್ಯಾನ್ನಲ್ಲಿ ತನ್ನ ಜೀವನವನ್ನು ಪ್ರಾರಂಭಿಸುತ್ತಾಳೆ.
ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ- ಕ್ಲೋಯ್ ಝಾವೋ ಅತ್ಯುತ್ತಮ ಧ್ವನಿ ಪ್ರಶಸ್ತಿಯು 'ಸೌಂಡ್ ಆಫ್ ಮೆಟಲ್' ಸಿನಿಮಾ ಪಡೆದುಕೊಂಡಿದೆ. ನಿಕೋಲಸ್ ಬೆಕರ್, ಜೈಮ್ ಬಕ್ಷ್ಟ್, ಮಿಶೆಲ್ ಕೌಟೊಲೆಂಕ್, ಕಾರ್ಲೋಸ್ ಕೊರ್ಟೆಸ್ ಮತ್ತು ಫಿಲಿಪ್ ಬ್ಲಾಡ್ ಅವರು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೆಟಲ್ ಡ್ರಮ್ ಬಾರಿಸುವ ಸಂಗೀತಗಾರ ತನ್ನ ಶ್ರವಣ ಕಳೆದುಕೊಳ್ಳುತ್ತಾನೆ. ಬಳಿ ಆತ ಜೀವನ ಯಾವ ರೀತಿ ನಡೆಸುತ್ತಾನೆ ಎಂಬುದನ್ನು ತಿಳಿಸುತ್ತದೆ.
- ಉತ್ತಮ ಪೋಷಕ ನಟ ಪ್ರಶಸ್ತಿ - ಡೇನಿಯಲ್ ಕಾಲೂಯ (ಜೂಡಾಸ್ ಆ್ಯಂಡ್ ದಿ ಬ್ಕ್ಯಾಕ್ ಮೆಸ್ಸಿಹ್ ಸಿನಿಮಾ)
ಉತ್ತಮ ಪೋಷಕ ನಟ ಪ್ರಶಸ್ತಿ - ಡೇನಿಯಲ್ ಕಾಲೂಯ - ಉತ್ತಮ ಪೋಷಕ ನಟಿ ಪ್ರಶಸ್ತಿ -ಯೌನ್ ಯುಹ್ ಜಂಗ್ (ಮಿನಾರಿ)
- ಬೆಸ್ಟ್ ಡಾಕ್ಯುಮೆಂಟರಿ ಫೀಚರ್ - ಮೈ ಆಕ್ಟೊಪಸ್ ಟೀಚರ್
- ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್- ಕಾಲೆಟ್
- ಬೆಸ್ಟ್ ಲೈವ್ ಆಕ್ಷನ್ ಶಾರ್ಟ್- ಟು ಡಿಸ್ಟಾಂಟ್ ಸ್ಟ್ರೇಂಜರ್
- ಬೆಸ್ಟ್ ಆ್ಯನಿಮೇಟೆಡ್ ಶಾರ್ಟ್- ಇಫ್ ಅನಿತಿಂಗ್ ಹ್ಯಾಪೆನ್ಸ್ ಐ ಲವ್ ಯೂ
- ಉತ್ತಮ ಮೇಕಪ್-ಕೇಶ ವಿನ್ಯಾಸ - 'ಮ ರೈನಿಸ್ ಬ್ಯಾಕ್ ಬಾಟಮ್' ಸಿನಿಮಾ
'ಮ ರೈನಿಸ್ ಬ್ಯಾಕ್ ಬಾಟಮ್' ಸಿನಿಮಾ - ಉತ್ತಮ ವಸ್ತ್ರ ವಿನ್ಯಾಸ - 'ಮ ರೈನಿಸ್ ಬ್ಯಾಕ್ ಬಾಟಮ್' ಸಿನಿಮಾ
- ಬೆಸ್ಟ್ ವಿಶ್ಯುವಲ್ ಎಫೆಕ್ಟ್ - ಟೆನೆಟ್
- ದಿ ಬೆಸ್ಟ್ ಇಂಟರ್ನ್ಯಾಷನಲ್ ವಿಶೇಷ (ಫೀಚರ್) ಫಿಲ್ಮ್ - 'ಅನದರ್ ರೌಂಡ್'
- ಬೆಸ್ಟ್ ಆ್ಯನಿಮೇಟೆಡ್ - 'ಸೋಲ್'
ಬೆಸ್ಟ್ ಆ್ಯನಿಮೇಟೆಡ್ - 'ಸೋಲ್' - ಬೆಸ್ಟ್ ಪ್ರೊಡಕ್ಷನ್ ಡಿಸೈನ್ - ಮ್ಯಾಂಕ್
- ಬೆಸ್ಟ್ ಸಿನಿಮಾಟೊಗ್ರಾಫಿ - ಮ್ಯಾಂಕ್
- ಬೆಸ್ಟ್ ಸಿನಿಮಾ ಎಡಿಟಿಂಗ್ - ಸೌಂಡ್ ಆಫ್ ಮೆಟಲ್
- ಜೀನ್ ಹರ್ಷೋಲ್ಟ್ ಮಾನವೀಯ ಪ್ರಶಸ್ತಿ: ಟೈಲರ್ ಪೆರಿ
- ಬೆಸ್ಟ್ ಒರಿಜಿನಲ್ ಸ್ಕೋರ್ - ಸೋಲ್
ಇನ್ನು ಭಾರತೀಯ ಸಿನಿಮಾ ರಂಗ ಇಲ್ಲಿಯವರೆಗೆ ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿದೆ.