ಕರ್ನಾಟಕ

karnataka

ETV Bharat / sitara

2020 ಆಸ್ಕರ್​ ಅವಾರ್ಡ್ಸ್​: ಮೂರು ವಿಭಾಗಗಳಲ್ಲಿ 'ಜೋಕರ್​' ಇಷ್ಟೊಂದು ನಾಮಿನೇಟ್! ​ - 2020 ಆಸ್ಕರ್​ ಅವಾರ್ಡ್ಸ್​

ಅಮೆರಿಕಾದ ಪ್ರಖ್ಯಾತ ವಿತ್ರ ನಿರ್ಮಾಪಕ ಟಾಡ್ ಫಿಲಿಪ್ಸ್ ನಿರ್ಮಾಣದ ಜೋಕರ್ ಚಿತ್ರವು, ಆಸ್ಕರ್ ಪ್ರಶಸ್ತಿಯ ಉತ್ತಮ ಚಿತ್ರ, ಉತ್ತಮ ನಿರ್ದೇಶಕ ಹಾಗೂ ಉತ್ತಮ, ಉತ್ತಮ ನಟ ಪ್ರಶಸ್ತಿಗೆ ಒಟ್ಟು 11 ಮತಗಳೊಂದಿಗೆ ಜೋಕರ್ ಚಿತ್ರ ನಾಮಿನೇಟ್​ ಆಗಿದೆ.

Oscars 2020
2020 ಆಸ್ಕರ್​ ಅವಾರ್ಡ್ಸ್

By

Published : Jan 14, 2020, 10:21 AM IST

ಲಾಸ್​ ಏಂಜೆಲ್ಸ್​:ಅಮೆರಿಕದ ಪ್ರಖ್ಯಾತ ವಿತ್ರ ನಿರ್ಮಾಪಕ ಟಾಡ್ ಫಿಲಿಪ್ಸ್ ನಿರ್ಮಾಣದ ಜೋಕರ್ ಚಿತ್ರವು, ಒಟ್ಟು ಮೂರು ವಿಭಾಗಗಳಲ್ಲಿ ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗಿದೆ.

ಆಸ್ಕರ್ ಪ್ರಶಸ್ತಿಯ ಉತ್ತಮ ಚಿತ್ರ, ಉತ್ತಮ ನಿರ್ದೇಶಕ ಹಾಗೂ ಉತ್ತಮ, ಉತ್ತಮ ನಟ ಪ್ರಶಸ್ತಿಗೆ ಒಟ್ಟು 11 ಮತಗಳೊಂದಿಗೆ ಜೋಕರ್ ಚಿತ್ರ ನಾಮಿನೇಟ್​ ಆಗಿದೆ.

ಸ್ಯಾಮ್ ಮೆಂಡೆಸ್ ಅವರ ವಲ್ಡ್​ ವಾರ್​ ಡ್ರಾಮಾ 1917, ಕ್ವೆಂಟಿನ್ ಟ್ಯಾರಂಟಿನೊ ಅವರ ಓಡ್​ ಟು ಲಾಸ್​ ಏಂಜೆಲ್ಸ್,​ ವನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಮತ್ತು ಮಾರ್ಟಿನ್ ಸ್ಕಾರ್ಸೆಸೆ ಅವರ ಮಾಬ್ ಎಪಿಕ್ ದಿ ಇರಿಷ್ಮಾನ್ ಚಿತ್ರಗಳು 10 ಮತಗಳೊಂದಿಗೆ ಪಟ್ಟಿಯಲ್ಲಿ ಹಿಂದಿದೆ.

ಈ ಚಿತ್ರಗಳು, ಫೋರ್ಡ್ ವಿ ಫೆರಾರಿ, ಜೊಜೊ ರ‍್ಯಾಬಿಟ್, ಲಿಟಲ್ ವುಮೆನ್, ಮ್ಯಾರೇಜ್ ಸ್ಟೋರಿ ಮತ್ತು ಪ್ಯಾರಾಸೈಟ್​ ಚಿತ್ರಗಳೊಂದಿಗೆ ಅತ್ಯುತ್ತಮ ಚಿತ್ರಕ್ಕಾಗಿ ಸ್ಪರ್ಧಿಸಲಿವೆ.

2020 ರ ಆಸ್ಕರ್ ನಾಮನಿರ್ದೇಶನಗಳ ಸಂಪೂರ್ಣ ಪಟ್ಟಿ...

ಅತ್ಯುತ್ತಮ ಚಲನಚಿತ್ರ:

  • ಫೋರ್ಡ್ ವಿ ಫೆರಾರಿ
  • ದಿ ಐರಿಶ್​ಮೆನ್​
  • ಜೊಜೊ ರ‍್ಯಾಬಿಟ್
  • ಜೋಕರ್
  • ಲಿಟಲ್ ವುಮೆನ್
  • ಮ್ಯಾರೇಜ್ ಸ್ಟೋರಿ
  • 1917
  • ವನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್
  • ಪ್ಯಾರಾಸೈಟ್


ಉತ್ತಮ ನಟ:

  • ಆಂಟೋನಿಯೊ ಬಾಂಡೆರಾಸ್ (ಪೈನ್​ ಅಂಡ್​ ಗ್ಲೋರಿ)
  • ಲಿಯೊನಾರ್ಡೊ ಡಿಕಾಪ್ರಿಯೊ (ವನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್)
  • ಆಡಮ್ ಡ್ರೈವರ್ (ಮ್ಯಾರೇಜ್ ಸ್ಟೋರಿ)
  • ಜೊವಾಕ್ವಿನ್ ಫೀನಿಕ್ಸ್ (ಜೋಕರ್)
  • ಜೊನಾಥನ್ ಪ್ರೈಸ್ (ದಿ ಟು ಪೋಪ್ಸ್​)

ಉತ್ತಮ ನಟಿ:

  • ಸಿಂಥಿಯಾ ಎರಿವೊ (ಹ್ಯಾರಿಯೆಟ್)
  • ಸ್ಕಾರ್ಲೆಟ್ ಜೋಹಾನ್ಸನ್ (ಮ್ಯಾರೇಜ್ ಸ್ಟೋರಿ)
  • ಸಾಯೋರ್ಸ್ ರೊನಾನ್ (ಲಿಟಲ್ ವುಮೆನ್)
  • ಚಾರ್ಲಿಜ್ ಥರಾನ್ (ಬಾಂಬ್ ಶೆಲ್)
  • ರೆನೀ ಜೆಲ್ವೆಗರ್ (ಜೂಡಿ)

ABOUT THE AUTHOR

...view details