ಒರಟ ಐಲವ್ ಯೂ ಹಾಗೂ ತ್ರಾಟಕ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿ ಮರೆಯಾಗಿದ್ದ ನಟಿ ಹೃದಯ ಅವಂತಿಕ ಈಗ ನವರಾತ್ರಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಮತ್ತೆ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ.
ನವ ನಿರ್ದೇಶಕ ಲಕ್ಷ್ಮೀಕಾಂತ್ ಚೆನ್ನ ‘ನವರಾತ್ರಿ’ ಚಿತ್ರಕ್ಕೆ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಫಿಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ವಂಶಿ ಬಂಡವಾಳವನ್ನು ಹೂಡಿದ್ದಾರೆ. ಇನ್ನು ನವರಾತ್ರಿ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಒಳಗೊಂಡಿದ್ದು, ನವರಸಗಳಿಂದ ಕೂಡಿದ ಚಿತ್ರವಾಗಿದೆ. ಇಲ್ಲಿ ದೇವರು ಹಾಗೂ ದೆವ್ವ ಎರಡು ಅಂಶಗಳು ಪ್ರಮುಖ ಪಾತ್ರ ನಿರ್ವಹಿಸಿದ್ದು, ನಟಿ ಹೃದಯ ಅವಂತಿಕ ಈ ಸಿನಿಮಾದಲ್ಲಿ ಮಾಡರ್ನ್ ಹಾಗೂ ಸಾಂಪ್ರದಾಯಿಕ ಲುಕ್ ಎರಡರಲ್ಲೂ ಕಾಣಿಸಿಕೊಂಡಿದ್ದಾರೆ.