ಬೆಂಗಳೂರು: ಸಂಜನಾ ಗಲ್ರಾನಿ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿಣಿ ಇರುವ ಸೆಲ್ನಲ್ಲೇ ಇದ್ದಾರೆ. ಇದೀಗ ಸಿಸಿಬಿ ಅಧಿಕಾರಿಗಳು ಸಂಜನಾ ಮತ್ತೊಂದು ಮುಖವನ್ನು ಬಯಲು ಮಾಡಿದ್ದಾರೆ. ತನಿಖೆಯಲ್ಲಿ ಆರೋಪಿ 4 ಪ್ರಕಾಶ್ ರಾಂಕಾನಿಂದ ಸಂಜನಾ ಮುಖವಾಡ ಬಹಿರಂಗವಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಎ14 ಆಗಿರುವ ಸಂಜನಾ ಗಲ್ರಾನಿ ಸಿಸಿಬಿ ವಿಚಾರಣೆಯಲ್ಲಿ ನನಗೆ ಏನೂ ಗೊತ್ತಿಲ್ಲ, ನಾನು ಏನೂ ತಪ್ಪು ಮಾಡಿಲ್ಲ ಎಂದಷ್ಟೇ ಹೇಳುತ್ತಿದ್ದರು. ಆದರೆ ಸಿಸಿಬಿ ತನಿಕಾಧಿಕಾರಿಗಳು ಪಟ್ಟು ಬಿಡದೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸಂಜನಾ ಗಲ್ರಾನಿ ಹೈ-ಫೈ ಡ್ರಗ್ ಪಾರ್ಟಿಯಲ್ಲಿ ಭಾಗಿಯಾಗಿರುವುದು ಮಾತ್ರವಲ್ಲದೆ ಪ್ರಕರಣದಲ್ಲಿ ಬಂಧಿತರಾದ ಎ4 ಪ್ರಕಾಶ್ ರಾಂಕಾ, ರಾಹುಲ್ ಜೊತೆ ಸೇರಿ ಬೆಂಗಳೂರು, ಗೋವಾ, ಕೇರಳ, ಶ್ರೀಲಂಕಾ ಸೇರಿದಂತೆ ಹಲವೆಡೆ ಪಬ್ ಬಾರ್, ಅಪಾರ್ಟ್‌ಮೆಂಟ್ ಪಾರ್ಟಿಗಳಿಗೆ ಡ್ರಗ್ಸನ್ನು ಕೊರ್ಡ್ ವರ್ಡ್ ಮುಖಾಂತರ ಸಪ್ಲೈ ಮಾಡಿರುವುದು ಬೆಳಕಿಗೆ ಬಂದಿದೆ.