ಸ್ಯಾಂಡಲ್ವುಡ್ನಲ್ಲಿ ಒಂದು ಮುತ್ತಿನ ಕಥೆ, ಒಂದು ಮೊಟ್ಟೆಯ ಕಥೆ ಸಿನಿಮಾಗಳು ಬಂದಿವೆ. ಇದೀಗ ಇಂಥದ್ದೇ ಹೆಸರಿನ ಮತ್ತೊಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನೈಜ ಘಟನೆ ಆಧರಿಸಿ ತಯಾರಾದ 'ಒಂದು ಗಂಟೆಯ ಕಥೆ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಈ ವಾರ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ 'ಒಂದು ಗಂಟೆಯ ಕಥೆ' - Ajay raj new movie
ಕಶ್ಯಪ್ ದಾಕೋಜು ನಿರ್ಮಾಣದಲ್ಲಿ ದ್ವಾರ್ಕಿ ರಾಘವ್ ಚಿತ್ರಕಥೆ ಬರೆದು ನಿರ್ದೇಶಿಸಿರುವ 'ಒಂದು ಗಂಟೆಯ ಕಥೆ' ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಅಜಯ್ ರಾಜ್, ಶನಾಯ ಕಾಟ್ವೆ ಹಾಗೂ ಇನ್ನಿತರರು ನಟಿಸಿದ್ದಾರೆ.
ಇದನ್ನೂ ಓದಿ:'ಗುರು ಶಿಷ್ಯರು' ಚಿತ್ರಕ್ಕೆ ನಾಯಕಿಯಾಗಿ ಬಂದ್ರಾ ನಿಶ್ವಿಕಾ ನಾಯ್ಡು...?
ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ನಿರ್ಮಿಸಿರುವ 'ಒಂದು ಗಂಟೆಯ ಕಥೆ' ಇದೇ ವಾರ ಬಿಡುಗಡೆಯಾಗುತ್ತಿದೆ. ದುಶ್ಯಂತ್ ಹಾಗೂ ಶ್ವೇತ ದಾಕೋಜು ಈ ಚಿತ್ರದ ಸಹ ನಿರ್ಮಾಪಕರು. ದ್ವಾರ್ಕಿ ರಾಘವ್ ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳಿಗೆ ಡೆನಿಸ್ ವಲ್ಲಭನ್ ಸಂಗೀತ ನೀಡಿದ್ದಾರೆ. ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ಮಲ್ಲಯ್ಯ ಸಂಕಲನ ಈ ಚಿತ್ರಕ್ಕಿದೆ.ಅಜಯ್ ರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಶನಾಯ ಕಾಟ್ವೆ. ಸ್ವಾತಿ ಶರ್ಮ,ಪ್ರಕಾಶ್ ತುಮ್ಮಿನಾಡ್, ಯಶವಂತ ಸರ್ ದೇಶಪಾಂಡೆ, ಚಿದಾನಂದ್, ಪ್ರಶಾಂತ್ ಸಿದ್ದಿ, ಸಿಲ್ಲಿಲಲ್ಲಿ ಆನಂದ್, ನಾಗೇಂದ್ರ ಶಾ, ಚಂದ್ರಕಲಾ, ರೆಮೊ, ಎಂ.ಎನ್.ಲಕ್ಷ್ಮೀದೇವಿ ಹಾಗೂ ಇನ್ನಿತರರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.