ಕರ್ನಾಟಕ

karnataka

ETV Bharat / sitara

ದುಷ್ಟರ ರುಂಡ ಚೆಂಡಾಡಿದ ವೀರಾಗ್ರಣಿ: ಸಿನಿಮಾವಾಗಿ ಬರ್ತಿದೆ ಓಬವ್ವನ ಚರಿತೆ! - ಚಿತ್ರದುರ್ಗ

ಈ ಐತಿಹಾಸಿಕ ಚಿತ್ರಕ್ಕೆ ಬಿ.ಎ ಪುರುಷೋತ್ತಮ್ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ರಿಲೀಸ್​ಗೆ ರೆಡಿಯಾಗಿದೆ.

ಓನಕೆ ಓಬವ್ವ ಚಿತ್ರತಂಡ

By

Published : May 30, 2019, 9:49 AM IST

ಚಿತ್ರದುರ್ಗದ ಕಲ್ಲಿನ‌ ಕೋಟೆ ಅಂದ ತಕ್ಷಣ ಥಟ್ ಅಂತ ನೆನಪಾಗೋದು ವೀರವನಿತೆ ಓನಕೆ ಓಬವ್ವನ ಸಾಹಸಗಾಥೆ. ಚಿತ್ರದುರ್ಗದ ರಕ್ಷಣೆಗಾಗಿ ಕಚ್ಚೆ ಕಟ್ಟಿ ಕೆಚ್ಚೆದೆಯ ಧೈರ್ಯ ಪ್ರದರ್ಶಿಸಿದ ಈ ವೀರ ವನಿತೆ ಎದುರಾಳಿಗಳ ರುಂಡ ಚೆಂಡಾಡಿ ವೀರ ಮರಣವನ್ನಪ್ಪಿದ್ದಳು. ಈ ವೀರಾಗ್ರಣಿಯ ಜೀವನಗಾಥೆ ಸಿನಿಮಾವಾಗಿ ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.

ಚಿತ್ರಕ್ಕೆ 'ಚಿತ್ರದುರ್ಗದ ಓನಕೆ ಒಬವ್ವ' ಎಂದೇ ಹೆಸರಿಟ್ಟಿದ್ದು, ನಿನ್ನೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈ ಐತಿಹಾಸಿಕ ಚಿತ್ರಕ್ಕೆ ಬಿ.ಎ ಪುರುಷೋತ್ತಮ್ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಈ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು ರಿಲೀಸ್​ಗೆ ರೆಡಿಯಾಗಿದೆ.

ಓನಕೆ ಓಬವ್ವ ಚಿತ್ರತಂಡ

ಡಾ. ಬಿ.ಎಲ್ ವೇಣು ಕಥೆ ಬರೆದಿದ್ದು, ಮೋಷನ್ ಪಿಕ್ಚರ್ಸ್ ಲಾಂಚನದಲ್ಲಿ ಎ ದೇವರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಓಬವ್ವನ ಪಾತ್ರದಲ್ಲಿ ಹೊಸ ನಟಿ ತಾರಾ ಅವರು ನಟಿಸಿದ್ದಾರೆ. ಅಲ್ಲದೇ ಈ‌ ಚಿತ್ರದಲ್ಲಿ ಬಹುದೊಡ್ಡ ತಾರಾ ಬಳಗವೇ ಇದ್ದು, ಚೇತನ್, ಗಣೇಶ್ ರಾವ್, ಟಿ ಎ ಬಾಲಕೃಷ್ಣ, ವಿಜಯ್ ಕುಮಾರ್, ಸುಮಾ ಮಹೇಂದರ್‌, ಪ್ರವೀಣ್ ದಾಸ್, ಅಕ್ಷಯ್ ಸೇರಿದಂತೆ ಹಲವು ನಟರು ಚಿತ್ರದಲ್ಲಿ ನಟಿಸಿದ್ದಾರೆ‌.

ಚೇತನ್ ಹಾಗೂ ಗಣೇಶ್ ರಾವ್ ಅವರನ್ನು ಹೊರತುಪಡಿಸಿದ್ರೆ ಬಹುತೇಕ ಹೊಸ ಕಲಾವಿದರ ತಂಡವೇ ಐತಿಹಾಸಿಕ ಚಿತ್ರಕ್ಕೆ ಬಣ್ಣ ಹಚ್ಚಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಎಸ್. ನಾಗು ಸಂಗೀತ ನೀಡಿದ್ದಾರೆ. ಎಲ್ಲಾ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿರೋದು ಮತ್ತೊಂದು ವಿಶೇಷ.

ಓಬವ್ವ ಚಿತ್ರವನ್ನು ಬಹುತೇಕ ಚಿತ್ರದುರ್ಗದಲ್ಲೇ ಶೂಟಿಂಗ್ ಮಾಡಿದ್ದು, ಅರಮನೆಯನ್ನು ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆಯಂತೆ. ಚಿತ್ರಕ್ಕೆ ಯಾವುದೇ ಕೊರತೆ ಆಗದಂತೆ ನಿರ್ಮಾಪಕ ದೇವರಾಜ್ ಎಲ್ಲವನ್ನು ಪೂರೈಸಿದ್ದಾರೆ ಎಂದು ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಮುಂದಿನ ತಿಂಗಳು ಬೆಳ್ಳಿ ಪರದೆ ಮೇಲೆ ಓಬವ್ವನ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗುವ ಸಾಧ್ಯತೆ ಇದೆ.

ABOUT THE AUTHOR

...view details