ತಮಿಳುನಾಡಿಗೆ ಅಮ್ಮನಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು ಗತಿಸಿವೆ. ಈ ಸಂದರ್ಭದಲ್ಲಿ ಜಯಲಲಿತಾ ಪಾತ್ರ ಮಾಡುತ್ತಿರುವ ಕಂಗನಾ ರಣಾವತ್ ಗೌರವ ನಮನ ಸಲ್ಲಿಸಿ 'ಅಮ್ಮ'ನನ್ನು ನೆನಪಿಸಿಕೊಂಡಿದ್ದಾರೆ.
ಸದ್ಯ ಜಯಲಲಿತಾ ಬಯೋಪಿಕ್ 'ತಲೈವಿ' ಸಿನಿಮಾ ಶೂಟಿಂಗ್ನಲ್ಲಿ ನಿರತರಾಗಿರುವ ನಟಿ ಕಂಗನಾ ರಣಾವತ್ ಶೂಟಿಂಗ್ನ ಕೆಲವು ಚಿತ್ರಾವಳಿಗಳನ್ನು ಹಂಚಿಕೊಂಡಿದ್ದಾರೆ. ಟ್ವೀಟ್ನಲ್ಲಿ ಜಯಲಲಿತಾ ಅವರನ್ನು ಸ್ಮರಿಸಿರುವ ನಟಿ, ಜಯಾ ಅಮ್ಮರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಮಾಡಿಕೊಳ್ಳುತ್ತ, ತಲೈವಿ ಚಿತ್ರೀಕರಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದೇನೆ. ನನ್ನ ತಲೈವಿ ಚಿತ್ರತಂಡದ ಎಲ್ಲರಿದೂ ಧನ್ಯವಾದಗಳು. ಅದರಲ್ಲೂ ನಮ್ಮ ತಂಡದ ಮುಖ್ಯಸ್ಥರಾಗಿರುವ ನಿರ್ದೇಶಕ ವಿಜಯ್ ಸರ್ಗೆ ಧನ್ಯವಾದಗಳು. ವಿಜಯ್ ಸರ್ ಸೂಪರ್ ಹ್ಯೂಮನ್ ರೀತಿ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವಾರದ ಚಿತ್ರೀಕರಣ ಬಾಕಿ ಇದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.