ಮುಂಬೈ ( ಮಹಾರಾಷ್ಟ್ರ) : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ತಮ್ಮ 67ರ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ 67 ವಯಸ್ಸಾದರೂ ಇನ್ನೂ ಉತ್ಸಾಹ ಮತ್ತು ಶಕ್ತಿ ಒಂಚೂರು ಕಡಿಮೆಯಾಗಿಲ್ಲ. ಇಂದಿಗೂ ಯುವನಟರನ್ನೂ ಮೀರಿಸುವ ನಟನೆ ಎಲ್ಲರನ್ನು ಆಕರ್ಷಿಸುತ್ತದೆ. ಜನ್ಮದಿನದ ಪ್ರಯುಕ್ತ ಇನ್ಸ್ಟಾಗ್ರಾಂನಲ್ಲಿ ಕೆಲವು ಫೋಟೋ ಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಗಳ ಜೊತೆಗೆ, ನನಗೆ ಜನ್ಮದಿನದ ಶುಭಾಶಯಗಳು! ಇಂದು ನಾನು ನನ್ನ 67 ನೇ ವಸಂತವನ್ನು ಪ್ರಾರಂಭಿಸುತ್ತಿರುವಾಗ, ನಾನು ನನ್ನ ಬಗ್ಗೆ ಹೊಂದಿರುವ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಉತ್ಸುಕನಾಗಿದ್ದೇನೆ. ಕಳೆದೆರಡು ವರ್ಷಗಳಲ್ಲಿ ನಾನು ಮಾಡಿದ ನಿಧಾನಗತಿಯ ಪ್ರಗತಿಗೆ ಈ ಚಿತ್ರಗಳು ಉದಾಹರಣೆಯಾಗಿವೆ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಒಬ್ಬ ಪ್ರದರ್ಶಕನಾಗಿ ಪ್ರತಿಯೊಂದು ಮಾರ್ಗವನ್ನು ಅನ್ವೇಷಿಸಲು ಪ್ರಯತ್ನಿಸಿದೆ. ಆದರೆ ನನ್ನೊಳಗೆ ಯಾವಾಗಲೂ ಒಂದು ಕನಸು ಇತ್ತು. ಆದರೆ ಅದನ್ನು ನನಸಾಗಿಸಲು ಎಂದಿಗೂ ಪ್ರಯತ್ನಿಸಲಿಲ್ಲ" ಎಂದು ಖೇರ್ ಬರೆದಿದ್ದಾರೆ.