ಹೈದರಾಬಾದ್ (ತೆಲಂಗಾಣ): ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಗೆ ಭೇಟಿ ನೀಡಿ ವೈಷ್ಣೋ ದೇವಿಯ ದರ್ಶನ ಪಡೆದಿದ್ದಾರೆ.
ಎಥ್ನಿಕ್ ವೇರ್‌ನಲ್ಲಿ ಮಿಂಚಿರುವ ಕಂಗನಾಗೆ ಅವರ ಸಹೋದರಿ ರಂಗೋಲಿ ಚಂದೇಲ್ ಸಾಥ್ ನೀಡಿದ್ದಾರೆ. ವೈಷ್ಣೋದೇವಿ ಗುಹೆಗೆ ಭೇಟಿ ನೀಡಿರುವ ಚಿತ್ರಗಳನ್ನು ತಲೈವಿ ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದು, ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ತಮ್ಮ ಹಿತೈಷಿಗಳಿಗೆ ಧನ್ಯವಾದ ಹೇಳಿದ್ದಾರೆ.
ಇಂದು ನನ್ನ ಜನ್ಮದಿನದ ಸಂದರ್ಭದಲ್ಲಿ ಭಗವತಿ ಶ್ರೀ ವೈಷ್ಣೋದೇವಿ ಜೀ ಅವರನ್ನು ಭೇಟಿ ಮಾಡಿದ್ದೇನೆ. ಅವರ ಮತ್ತು ನನ್ನ ಹೆತ್ತವರ ಆಶೀರ್ವಾದದೊಂದಿಗೆ ಈ ವರ್ಷವನ್ನು ಎದುರು ನೋಡುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಕಂಗನಾ ಬರೆದುಕೊಂಡಿದ್ದಾರೆ.
ಕಂಗನಾ ಪ್ರಸ್ತುತ ಒಟಿಟಿ ರಿಯಾಲಿಟಿ ಶೋ ಲಾಕ್ ಅಪ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಅವರು ಶೀಘ್ರದಲ್ಲೇ ತೇಜಸ್, ಢಾಕಡ್, ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ಎಮರ್ಜೆನ್ಸಿ ಮತ್ತು ದಿ ಇನ್ಕಾರ್ನೇಷನ್: ಸೀತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:ಮುಂದಿನ ಚಿತ್ರದಲ್ಲಿ ಜೋಡಿಯಾಗಿ ಮಿಂಚಲಿದ್ದಾರೆ ಸಮಂತಾ - ವಿಜಯ್ ದೇವರಕೊಂಡ?