ಕರ್ನಾಟಕ

karnataka

ETV Bharat / sitara

ಸೆನ್ಸಾರ್ ಬೋರ್ಡ್​ನಿಂದ ಪ್ರಮಾಣ ಪತ್ರ ಪಡೆದ 'ಒಂಬತ್ತನೇ ದಿಕ್ಕು' - Loose mada yogi starring Ombattane dikku

ದಯಾಳ್ ಪದ್ಮನಾಭನ್ ನಿರ್ದೇಶನದ 'ಒಂಬತ್ತನೇ ದಿಕ್ಕು' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಚಿತ್ರದಲ್ಲಿ ಯೋಗೀಶ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Ombattane dikku got permission from censor board
ಒಂಬತ್ತನೇ ದಿಕ್ಕು

By

Published : Jul 1, 2020, 10:08 AM IST

'ಹಗ್ಗದ ಕೊನೆ' ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನಿರ್ದೇಶಕ ದಯಾಳ್ ಪದ್ಮನಾಭನ್, ಆ ಕರಾಳ ರಾತ್ರಿ, ಪುಟ 109, ರಂಗನಾಯಕಿ, ತ್ರಯಂಬಕಂ ಸಿನಿಮಾಗಳನ್ನು ಸಾಲು ಸಾಲಾಗಿ ಸ್ಯಾಂಡಲ್​​​ವುಡ್​​​ಗೆ ನೀಡುತ್ತಾ ಬಂದಿದ್ದಾರೆ. ಇದೀಗ ಅವರ 'ಒಂಬತ್ತನೇ ದಿಕ್ಕು' ಚಿತ್ರದ ಮೇಲೆ ಕೂಡಾ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ.

ಯುಎ ಪ್ರಮಾಣಪತ್ರ ಪಡೆದ 'ಒಂಬತ್ತನೇ ದಿಕ್ಕು'

ಸೆನ್ಸಾರ್ ಮಂಡಳಿಯು 'ಒಂಬತ್ತನೇ ದಿಕ್ಕು' ಚಿತ್ರಕ್ಕೆ ಯಾವುದೇ ಕಟ್ ಮ್ಯೂಟ್ ಇಲ್ಲದೆ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಈ ಬಗ್ಗೆ ದಯಾಳ್ ಪದ್ಮನಾಭನ್ ಸಂತೋಷ ವ್ಯಕ್ತಪಡಿಸಿದ್ದಾರೆ. ಚಿತ್ರದ ಪೋಸ್ಟರ್​​ಗಳನ್ನು ನೋಡಿದರೆ ಇದೊಂದು ಸಸ್ಪೆನ್ಸ್ ಚಿತ್ರ ಎನ್ನಿಸುತ್ತದೆ. ಅದೇ ರೀತಿ ಹುಟ್ಟು, ಸಾವಿನ ನಡುವಿನ ಜೀವನದ ಘಟ್ಟಗಳನ್ನು ಕೂಡಾ ದಯಾಳ್ ಪದ್ಮನಾಭನ್ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ಎಂಬುದು ತಿಳಿಯುತ್ತದೆ.

ಯೋಗೀಶ್, ಅದಿತಿ ಪ್ರಭುದೇವ

ಚಿತ್ರದಲ್ಲಿ ಲೂಸ್ ಮಾದ ಖ್ಯಾತಿಯ ಯೋಗೀಶ್ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಸುಂದರ್ ವೀಣಾ, ಶ್ರುತಿ ನಾಯಕ್, ಯತಿರಾಜ್, ಮಧುಸೂಧನ್ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಿತಿನ್​​​ ಕಥೆ ಒದಗಿಸಿದ್ದಾರೆ, ಮಣಿಕಾಂತ್ ಖದ್ರಿ ಸಂಗೀತ, ಪ್ರೀತಿ ಮೋಹನ್ ಸಂಕಲನ, ವಿಕ್ರಮ್ ಮೋರ್ ಸಾಹಸ, ಅವಿನಾಶ್ ಶೆಟ್ಟಿ ನಿರ್ಮಾಣ, ವೆಂಕಟ್ ದೇವ್, ದಯಾಳ್ ಹಾಗೂ ಅಭಿಷೇಕ್ ಎಸ್​​​​​.ಎನ್​​. ಸಂಭಾಷಣೆ ಈ ಸಿನಿಮಾಗೆ ಇದೆ.

ABOUT THE AUTHOR

...view details