ಕರ್ನಾಟಕ

karnataka

ETV Bharat / sitara

ಅದಿತಿ ಜೊತೆ 'ಒಂಬತ್ತನೇ ದಿಕ್ಕು'ಗೆ ಹೊರಟ ಲೂಸ್​ ಮಾದ ಯೋಗಿ... - obattane dikku movie

ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಒಂಬತ್ತನೇ ದಿಕ್ಕು

By

Published : Sep 13, 2019, 10:05 AM IST

ನಟ ಲೂಸ್ ಮಾದ ಯೋಗಿ ಸದ್ಯ ಪರಿಮಳ ಲಾಡ್ಜ್​ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯುಲ್​ನಲ್ಲೇ ಯೋಗಿ ಅದಿತಿ ಪ್ರಭುದೇವ್ ಜೊತೆ ಒಂಬತ್ತನೇ ದಿಕ್ಕು ಹುಡುಕಲು ಶುರು ಮಾಡಿದ್ದಾರೆ.

ನಟ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ್​ ಅಭಿನಯದ, ದಯಾಳ್ ಪದ್ಮನಾಭನ್ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರ ಸೆಟ್ಟೇರಿದೆ. ಗಾಂಧಿನಗರದ ಓಣಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಆರ್ಯ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಅದಿತಿ ಪ್ರಭುದೇವ್, ಮೊದಲ ಬಾರಿಗೆ ಲೂಸ್ ಮಾದ ಯೋಗಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರಕ್ಕೆ ಪದ್ಮನಾಭ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕ ಗುರು ದೇಶಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಅವರ ಕಾಂಬಿನೇಷನ್​ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮುಂದಿನ ವಾರದಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ.

ABOUT THE AUTHOR

...view details