ಕನ್ನಡ ಸಿನಿಮಾಗಳಲ್ಲಿ ಈಗ ಅಂಕಿಗಳ ಶೀರ್ಷಿಕೆ ಮತ್ತೆ ಆರಂಭವಾಗುತ್ತಿದೆ. '6-5=2' ಹಾರರ್ ಸಿನಿಮಾ ಗೆದ್ದ ನಂತರ ಕೆಲವು ಸಿನಿಮಾಗಳಿಗೆ ಅಂಕಿಗಳ ಶೀರ್ಷಿಕೆ ಇಡಲಾಯಿತು. ಇದೀಗ '786' ಟೈಟಲ್ ಹೆಸರಿನ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ತಯಾರಾಗುತ್ತಿದೆ.
ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ತಯಾರಾಗುತ್ತಿದೆ ‘786’ ಹೆಸರಿನ ಸಿನಿಮಾ - ಸುಧಾ ಬೆಳವಾಡಿ
ಕನ್ನಡದಲ್ಲಿ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಓಂ ಪ್ರಕಾಶ್ ರಾವ್ ಇದೀಗ ‘786’ ಅಂಕಿ ಶೀರ್ಷಿಕೆ ಇಟ್ಟು ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಓಂ ಪ್ರಕಾಶ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು ಪವನ್ ಶೌರ್ಯ ನಾಯಕನಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ‘786’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ‘ಹಾಲು ತುಪ್ಪ’ ‘ಗೂಳಿ ಹಟ್ಟಿ’ ಹಾಗೂ ‘ಉಡುಂಬ’ ಸಿನಿಮಾಗಳ ನಾಯಕ ಪವನ್ ಸೂರ್ಯ ಅವರ ಹೆಸರನ್ನು ಪವನ್ ಶೌರ್ಯ ಎಂದು ಬದಲಾಯಿಸಿ ಈ ಸಿನಿಮಾಗೆ ನಾಯಕನನ್ನಾಗಿ ಮಾಡಿದ್ದಾರೆ. ಓಂ ಪ್ರಕಾಶ್ ಸುಮಾರು 25 ಕ್ಕೂ ಹೆಚ್ಚು ಸಿನಿಮಾಗಳಿಗೆ ನಿರ್ದೇಶನ ಮಾಡಿದವರು. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಬ್ಲಾಕ್ ಕೋಬ್ರಾ ವಿಜಯ್ ಸೇರಿ ಬಹುತೇಕ ಎಲ್ಲಾ ಹೀರೋಗಳ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ ಓಂ ಪ್ರಕಾಶ್. '786' ಒಂದು ವಾಹನದ ಸಂಖ್ಯೆ ಅಂತೆ. ಕೆಎ 01 ಎಂ ಒ 786’ ಈ ವಾಹನದ ನಂಬರ್ ಎಂದು ಚಿತ್ರತಂಡ ಹೇಳಿದೆ.
ಮೇಘನ ಭಾರದ್ವಾಜ್, ಕೃತಿಕಾ, ಮಂಜೇಶ್, ಸ್ವಸ್ತಿಕ್ ಶಂಕರ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ಚಿತ್ರ ಶೆಣೈ ಹಾಗೂ ಇತರರು ಸಿನಿಮಾದ ತಾರಾಗಣದಲ್ಲಿದ್ದಾರೆ. ಧರ್ಮವಿಶ್ ಚಿತ್ರಕ್ಕೆ ಸಂಗೀತ ನೀಡಿದ್ದು ರವಿ ಕುಮಾರ್ ಛಾಯಾಗ್ರಹಣ ಇದೆ. ಎಂ.ಎಸ್. ರಮೇಶ್ ಸಂಭಾಷಣೆ, ಲಕ್ಷ್ಮಣ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಈ ಸಿನಿಮಾಗೆ ಓಂ ಪ್ರಕಾಶ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡಲಿದ್ದಾರೆ. ಪವನ್ ಶೌರ್ಯ ಮೂಲತಃ ಕೆಂಗೇರಿ ಬಳಿ ಒಂದು ಜಿಮ್ ನಡೆಸುತ್ತಿದ್ದು ‘ಉಡುಂಬ’ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡಿದ್ದರು. ‘ಉಡುಂಬ’ 25 ದಿವಸಗಳ ಯಶಸ್ವಿ ಪ್ರದರ್ಶನ ಕಾಣುತ್ತಿದೆ.