ಕರ್ನಾಟಕ

karnataka

ETV Bharat / sitara

ಐ ಲವ್ ಯು..ಯು ಮಸ್ಟ್ ಲವ್ ಮಿ ಅಂತ ಪುನೀತ್ ಹೇಳ್ತಿರೋದು ಯಾರಿಗೆ...? - Om movie dialogue in Yuvaratna film

25 ವರ್ಷಗಳ ಹಿಂದೆ ತೆರೆ ಕಂಡ 'ಓಂ' ಚಿತ್ರದ ಐ ಲವ್ ಯು...ಯು ಮಸ್ಟ್ ಲವ್ ಮಿ ಎಂಬ ಡೈಲಾಗನ್ನು ಪುನೀತ್ ರಾಜ್​​ಕುಮಾರ್​ ಅಭಿನಯದ 'ಯುವರತ್ನ' ಚಿತ್ರದಲ್ಲಿ ಕೂಡಾ ಬಳಸಿಕೊಳ್ಳಲಾಗಿದ್ದು ಪುನೀತ್​​ ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಸಂತೋಷ್ ಆನಂದ್​​​​​​ರಾಮ್ ಷೇರ್ ಮಾಡಿಕೊಂಡಿದ್ದಾರೆ.

Om movie dialogue in Yuvaratna film
ಯುವರತ್ನ

By

Published : Jul 13, 2020, 4:10 PM IST

ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​​ವುಡ್​ ಕಡೆ ತಿರುಗಿನೋಡುವಂತೆ ಮಾಡಿದ ಚಿತ್ರ 'ಓಂ'. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಹಾಗೂ ಪ್ರೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಚಿತ್ರ ಇತ್ತಿಚೆಗಷ್ಟೇ 25 ವರ್ಷಗಳ ವಾರ್ಷಿಕೋತ್ಸವ ಆಚರಿಸಿಕೊಂಡಿತು.

'ಯುವರತ್ನ' ಚಿತ್ರಕ್ಕಾಗಿ ಪುನೀತ್ ಡಬ್ಬಿಂಗ್​

ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳಾದರೂ ಇಂದಿಗೂ ಈ ಸಿನಿಮಾ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಈ ಚಿತ್ರದ ಹಾಡುಗಳು. ಡೈಲಾಗ್​​ಗಳು ಇಂದಿಗೂ ಬಹಳ ಫೇಮಸ್. ಹಾಡಿನ ನಡುವೆ ಬರುವ ಐ ಲವ್​ ಯು, ಯು ಮಸ್ಟ್​ ಲವ್ ಮಿ ಎಂಬ ಡೈಲಾಗ್ ಹುಡುಗರ ಮೋಸ್ಟ್ ಫೇವರೆಟ್. ಇದೀಗ ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಈ ಡೈಲಾಗ್​ ಹೇಳುತ್ತಿದ್ದಾರೆ.

'ಓಂ'

ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿ 'ಓಂ' ಚಿತ್ರವನ್ನು ನೆನಪಿಸುವ ಸನ್ನಿವೇಶ ಇದೆ. ಐ ಲವ್ ಯು , ಯು ಮಸ್ಟ್ ಲವ್ ಮಿ ಎಂದು ಪುನೀತ್ ರಾಜ್‍ಕುಮಾರ್ ಹಾಡುತ್ತಿದ್ದಾರೆ. ಪುನೀತ್ 'ಯುವರತ್ನ' ಚಿತ್ರದ ಡಬ್ಬಿಂಗ್​​ನಲ್ಲಿ ಬ್ಯುಸಿ ಆಗಿದ್ದು ನಿರ್ದೇಶಕ ಸಂತೋಷ್ ಆನಂದ್​​​​​ರಾಮ್ ಪುನೀತ್​ ಡಬ್ಬಿಂಗ್ ಮಾಡುತ್ತಿರುವ ವಿಡಿಯೋ ತುಣುಕೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಯುವರತ್ನ' ಚಿತ್ರದಲ್ಲಿ ಪುನೀತ್​​

'ಯುವರತ್ನ' ಚಿತ್ರದಲ್ಲಿ ಈ ಸೀನ್ ಬಹಳ ಮುಖ್ಯವಂತೆ. ತೆರೆ ಮೇಲೆ ಈ ದೃಶ್ಯ ಹೇಗೆ ಬರಲಿದೆ ಎಂಬುದನ್ನು ನೋಡಲು ಪುನೀತ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ABOUT THE AUTHOR

...view details