ಕರ್ನಾಟಕ

karnataka

ETV Bharat / sitara

ಸರಿಗಮಪ ಖ್ಯಾತಿಯ ಚನ್ನಪ್ಪನ ’ಮಾರ್ಲಮಿ’ ಚಿತ್ರಕ್ಕೆ ಶುಭ ಕೋರಿದ ಒಳ್ಳೆ ಹುಡುಗ ಪ್ರಥಮ್ - undefined

ಸರಿಗಮಪ ರಿಯಾಲಿಟಿ ಷೋ ನಲ್ಲಿ ಮಿಂಚಿದ್ದ ಚನ್ನಪ್ಪ ಈಗ " ಮಾರ್ಲಮಿ" ಎಂಬ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆಗೆ ಬರ್ತಿದ್ದಾರೆ . " ಮಾರ್ಲಮಿ" ಚಿತ್ರದ ಮುಹೂರ್ತ ಇಂದು ನಗರದ ಬಂಡಿಮಾಕಾಳಮ್ಮ ದೇವಾಲಯದಲ್ಲಿ ನೆರವೇರಿದ್ದು, ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ " ಮಾರ್ಲಮಿ" ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ರು.

ಮಾರ್ಲಮಿ" ಚಿತ್ರದ ಮುಹೂರ್ತ

By

Published : Jun 11, 2019, 9:49 AM IST

ಸ್ಮಾಲ್ ಸ್ಕ್ರೀನ್‌ ‌ನಿಂದ ಬಿಗ್ ಸ್ಕ್ರೀನ್ ಗೆ ಈಗಾಗಲೇ ಸಾಕಷ್ಟು ನಟರು ಎಂಟ್ರಿ ಕೊಟ್ಟಾಗಿದೆ. ಅಲ್ಲದೆ ಕಿರುತೆರೆಯ ರಿಯಾಲಿಟಿ ಶೋಗಳ ಸ್ಟಾರ್ ಗಳು ಕೂಡ ಬೆಳ್ಳಿತೆರೆಗೆ ಬಂದಿದ್ದಾರೆ .ಈಗ ಅವರ ಸಾಲಿಗೆ ಖಾಸಗಿ ವಾಹಿನಿಯ ಸರಿಗಮಪ ರಿಯಾಲಿಟಿ ಷೋ ನಲ್ಲಿ ಮಿಂಚಿದ್ದ ಚನ್ನಪ್ಪ " ಮಾರ್ಲಮಿ" ಎಂಬ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆಗೆ ಬರ್ತಿದ್ದಾರೆ .

ಚನ್ನಪ್ಪನ ಮಾರ್ಲಮಿ ಚಿತ್ರ

ಈ ಹಿಂದೆ ಚನ್ನಪ್ಪ ಎರಡು ಚಿತ್ರಗಳಲ್ಲಿ ನಟಿಸಿದ್ರೂ ಇನ್ನೂ ಯಾವ ಚಿತ್ರವೂ ಶೂಟಿಂಗ್ ಕಂಪ್ಲೀಟ್ ಮಾಡಿಲ್ಲ .

ಈ ಗ್ಯಾಪ್ ನಲ್ಲಿ " ಮಾರ್ಲಮಿ" ಚಿತ್ರದ ಮುಹೂರ್ತ ಇಂದು ನಗರದ ಬಂಡಿಮಾಕಾಳಮ್ಮ ದೇವಾಲಯದಲ್ಲಿ ನೆರವೇರಿದ್ದು, ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ " ಮಾರ್ಲಮಿ" ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ರು.

ಇನ್ನು " ಮಾರ್ಲಮಿ" ಚಿತ್ರ ಹಳ್ಳಿ ಸೊಗಡಿನ ಸಿನಿಮಾವಾಗಿದೆ. ಈ ಚಿತ್ರದ ಟೈಟಲ್ ಹಳೇ ಮೈಸೂರು ಭಾಗದ ಜನರಿಗೆ ತುಂಬಾ ಚಿರಪರಿಚಿತವಾದ ಹೆಸರು‌. ಕಾರಣ ಮಾರ್ಲಮಿ ಅಂದ್ರೆ ಒಂದು ಹಬ್ಬವಾಗಿದೆ. ಅಲ್ಲದೇ ಮಾರ್ಲಮಿ ಹಬ್ಬವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ, ಹಾಗೆಯೇ ಮಾರ್ಲಮಿ ಪಕ್ಕಾ ಹಳ್ಳಿಗಾಡಿನ ಸಿನಿಮಾವಾಗಿದ್ದು, ಮಂಡ್ಯದ ಹಳ್ಳಿಯ ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರದಲ್ಲಿ ‌ಹೆಣೆದಿರುವುದಾಗಿ‌ ನಿರ್ದೇಶಕ ವಿನಯ್ ಕುಮಾರ್ ತಿಳಿಸಿದರು.

ಇದೊಂದು ಹಾಸ್ಯ ಮಿಶ್ರಿತ ಚಿತ್ರವಾಗಿದ್ದು.ಚನ್ನಪ್ಪ ರಿಯಲ್ ಲೈಫ್ ನಂತೆ ರೀಲ್ ನಲ್ಲೂ ಗಾಯಕನಾಗಿಯೇ ಇರ್ತಾರೆ ಜೊತೆಗೆ ಥ್ರಿಲ್ ಅನಿಸುವ ಕೆಲವು ಅಂಶಗಳನ್ನು ಈ ಸಿನಿಮಾದಲ್ಲಿ ಸೇರಿಸಲಾಗಿದೆ ಎಂಬುದು ನಿರ್ದೇಶಕರ ಮಾತು.

ಇನ್ನೂ ಈ ಚಿತ್ರದಲ್ಲಿ ಚನ್ನಪ್ಪನಿಗೆ ನಾಯಕಿಯಾಗಿ ಕಿರುತೆರೆ ನಟಿ ವರ್ಷಿತಾ ವರ್ಮಾ ಕಾಣಿಸಲಿದ್ದು. ವರ್ಷಿತಾ ಕೂಡ ಈ ಚಿತ್ರದ ಮೂಲಕ ಚಂದನವನದ ಕಡೆ ಮುಖ ಮಾಡಿದ್ದಾರೆ. ಇನ್ನೂ ಮಾರ್ಲಮಿ ಚಿತ್ರದ ಶೂಟಿಂಗ್ ಇದೇ ತಿಂಗಳ ೨೫ ರಿಂದ ಶುರುವಾಗಲಿದ್ದು ಮಂಡ್ಯ ಹಾಗೂ ಹಾಸನದ ಸುತ್ತ ಮುತ್ತ ಸುಮಾರು ೪೫ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

For All Latest Updates

TAGGED:

ABOUT THE AUTHOR

...view details