ಬೆಂಗಳೂರು: ಓಲ್ಡ್ ಮಾಂಕ್ ಚಿತ್ರ ರಾಜ್ಯಾದ್ಯಂತ ಕಳೆದ ವಾರ ಬಿಡುಗಡೆಯಾಗಿತ್ತು. ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತೇವೆ ಎಂದು ನಿರ್ದೇಶಕ ಹಾಗೂ ನಟ ಶ್ರೀನಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಾರೆ. ಆದರೆ ನಾವು ಸಕ್ಸಸ್ ಸಿಗಲಿ ಎಂದು ಮಾಡುತ್ತಿದ್ದೇವೆ. ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆನಡಾ, ಯು.ಎಸ್.ಎ ಹಾಗೂ ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.
ಶ್ರೀನಿ ಮಾತಿಗೆ ಜೊತೆಗೂಡಿಸಿದ ನಾಯಕಿ ಅದಿತಿ ಪ್ರಭುದೇವ, ಉತ್ತಮ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು.