ಕರ್ನಾಟಕ

karnataka

ETV Bharat / sitara

ಸೆಟ್ಟೇರುತ್ತಿದೆ ಪ್ರೇಮ ಕಥೆಯ 'ಒಲವೇ ಮಂದಾರ 2' - undefined

'ಒಲವೇ ಮಂದಾರ' 2011ರ ಫಿಲ್ಮ್ ಫೇರ್ ಅವಾರ್ಡ್ ಬಾಚಿಕೊಂಡಿದ್ದ ಸೂಪರ್ ಹಿಟ್ ಚಿತ್ರ. ಈಗ 'ಒಲವೇ ಮಂದಾರ 2' ಸಿನಿಮಾ ಸೆಟ್ಟೇರುತ್ತಿದೆ.

ಒಲವೇ ಮಂದಾರ 2

By

Published : Jul 20, 2019, 5:00 PM IST

'ಒಲವೇ ಮಂದಾರ' ಸಿನಿಮಾ ಮೂಲಕ ಕಮರ್ಷಿಯಲ್ ನಿರ್ದೇಶಕನಾಗಿ ಜಯತೀರ್ಥ ಹಾಗೂ ನಾಯಕನಾಗಿ ಶ್ರೀಕಿ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಟ್ಟಿದ್ರು. ಪ್ರೇಕ್ಷಕ ಪ್ರಭುಗಳಿಂದ ಒಳ್ಳೆಯ ರೆಸ್ಪಾನ್ಸ್​ ಪಡೆದಿದ್ದ 'ಒಲವೇ ಮಂದಾರ' ಬಾಕ್ಸಾಫೀಸ್​​ನಲ್ಲೂ ಸದ್ದು ಮಾಡಿತ್ತು.

ನಟ ಸನತ್

ಸದ್ಯ ಎಂಟು ವರ್ಷಗಳ ಬಳಿಕ 'ಒಲವೇ ಮಂದಾರ 2' ಸಿನಿಮಾ ರೆಡಿಯಾಗುತ್ತಿದೆ. ಹಾಗಂತಾ ಇದು ಪ್ರೀಕ್ವೆಲ್ ಚಿತ್ರದ ಮುಂದುವರೆದ ಭಾಗವಲ್ಲ. ಈ ಚಿತ್ರಕ್ಕೆ ಜಯತೀರ್ಥ ಆ್ಯಕ್ಷನ್ ಕಟ್ ಹೇಳ್ತಿಲ್ಲ, ಶ್ರೀಕಿ ನಾಯಕನಾಗಿ ನಟಿಸ್ತಿಲ್ಲ. ಬದಲಿಗೆ ಈ ಹಿಂದೆ 'ಇದೀಗ ಬಂದ ಸುದ್ದಿ' ಚಿತ್ರ ನಿರ್ದಶನ ಮಾಡಿದ್ದ ಎಸ್.ಪಾಟೀಲ್ 'ಒಲವೇ ಮಂದಾರ 2' ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ನಾಯಕನಾಗಿ 'ಕಮರೊಟ್ಟು ಚೆಕ್ ಪೋಸ್ಟ್' ಚಿತ್ರದ ಸನತ್ ನಾಯಕ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಪ್ರಜ್ಞಾ ಭಟ್ ಒಂದು ಪಾತ್ರದಲ್ಲಿ ಕಾಣಿಸಲಿದ್ದು, ಮತ್ತೊಂದು ಪಾತ್ರಕ್ಕೆ ನಾಯಕಿಯ ಹುಡುಕಾಟ ಶುರುವಾಗಿದೆ.

ನಿರ್ದೇಶಕ ಎಸ್​​.ಪಾಟೀಲ್​

ಪಕ್ಕಾ ಲವ್​ ಸ್ಟೋರಿಯ 'ಒಲವೇ ಮಂದಾರ 2' ಚಿತ್ರಕ್ಕೆ 'ಐ ಲವ್ ಯೂ' ಸಿನಿಮಾ ಖ್ಯಾತಿಯ ಕಿರಣ್ ತೋಟಂಬೈಲು ಸಂಗೀತ ನಿರ್ದೇಶನವಿದ್ದು, ಈಗಾಗಲೇ ಟ್ಯೂನ್ ಕಂಪೋಸ್ ಶುರು ಮಾಡಿದ್ದಾರೆ. ಬಸವ ಕಂಬೈನ್ಸ್ ಬ್ಯಾನರ್​​ನಡಿ ಚೇತನ್ ರಾಜ್, ರಮೇಶ್ ಮಾರ್ಗೋಲ್ ಹಾಗೂ ಟಿ.ಎಮ್. ಸತೀಶ್ ಎಂಬುವರು ಈ ಸಿನಿಮಾ ನಿರ್ಮಾಣ ಮಾಡಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ. ಮಂಡ್ಯ, ಮದ್ದೂರು, ರಾಮನಗರ ಹಾಗೂ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ನಟಿ ಪ್ರಜ್ಞಾ ಭಟ್

For All Latest Updates

TAGGED:

ABOUT THE AUTHOR

...view details