ಯಾವುದಾದರೂ ಸಿನಿಮಾ ಸಕ್ಸಸ್ ಆದರೆ ಆ ಸಿನಿಮಾವನ್ನು ಇತರ ಭಾಷೆಗಳಲ್ಲಿ ರಿಮೇಕ್ ಮಾಡುವ ಟ್ರೆಂಡ್ ಮೊದಲಿನಿಂದಲೂ ಇದೆ. ಕೆಲವು ರಿಮೇಕ್ ಸಿನಿಮಾಗಳು ಹಿಟ್ ಆದ್ರೆ ಮತ್ತೆ ಕೆಲವು ಹೇಳ ಹೆಸರಿಲ್ಲದಂತೆ ಫ್ಲಾಪ್ ಆಗುತ್ತವೆ.
ಹಿಂದಿಗೂ ರಿಮೇಕ್ ಆಗಲಿದೆಯಂತೆ 'ಓ ಬೇಬಿ'; ಸಮಂತಾ ಪಾತ್ರ ಮಾಡ್ತಾರಾ ಆಲಿಯಾ? - undefined
ಸಮಂತಾ ಅಕ್ಕಿನೇನಿ ನಟಿಸಿರುವ 'ಓ ಬೇಬಿ' ಸಿನಿಮಾವನ್ನು ನಿರ್ಮಾಪಕ ಸುರೇಶ್ ಬಾಬು ಹಿಂದಿಗೂ ರಿಮೇಕ್ ಮಾಡಲು ಚಿಂತಿಸುತ್ತಿದ್ದು ಸ್ಯಾಮ್ ಪಾತ್ರದಲ್ಲಿ ನಟಿಸಲು ಆಲಿಯಾ ಭಟ್ ಡೇಟ್ಸ್ ಕೇಳಿದ್ದಾರೆ ಎನ್ನಲಾಗಿದೆ.
ಕೊರಿಯನ್ ಹಿಟ್ ಸಿನಿಮಾ 'ಮಿಸ್ ಗ್ರ್ಯಾನಿ' ಯನ್ನು ಸಮಂತಾ ಅಕ್ಕಿನೇನಿ ನಟನೆಯಲ್ಲಿ ತೆಲುಗಿಗೆ ರಿಮೇಕ್ ಮಾಡಿ ಆ ಸಿನಿಮಾ ಕೂಡಾ ಹಿಟ್ ಆಗಿದೆ. 'ಓ ಬೇಬಿ' ಸಿನಿಮಾದಲ್ಲಿ ಪಂಚಭಾಷಾ ನಟಿ ಲಕ್ಷ್ಮಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂದಿನಿ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದು ನಟ ರಾಣಾ ತಂದೆ ಸುರೇಶ್ ಬಾಬು ಸಿನಿಮಾವನ್ನು ನಿರ್ಮಿಸಿದ್ದರು. 70 ವರ್ಷದ ವೃದ್ಧೆ 24 ವರ್ಷದ ಯುವತಿಯಾಗಿ ಬದಲಾಗುವ ಕಥೆ ಹೊಂದಿರುವ ಈ ಸಿನಿಮಾದಲ್ಲಿ ನಾಗಶೌರ್ಯ, ರಾಜೇಂದ್ರ ಪ್ರಸಾದ್, ರಾವ್ ರಮೇಶ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಇದೀಗ ಈ ಸಿನಿಮಾ ಬಾಲಿವುಡ್ಗೆ ರಿಮೇಕ್ ಆಗುತ್ತಿದೆಯಂತೆ. ಸುರೇಶ್ ಬಾಬು ಅವರೇ ಈ ಸಿನಿಮಾವನ್ನು ನಿರ್ಮಿಸಲಿದ್ದು ಸ್ಯಾಮ್ ಪಾತ್ರವನ್ನು ಹಿಂದಿಯಲ್ಲಿ ನಟಿಸಲು ಆಲಿಯಾ ಭಟ್ಗೆ ಕೇಳಲಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಆಲಿಯಾ ಆರ್ಆರ್ಆರ್, ಬ್ರಹ್ಮಾಸ್ತ್ರ, ಸಡಕ್ 2 ಸಿನಿಮಾಗಳಲ್ಲಿ ಬ್ಯುಸಿ ಇದ್ದು 'ಓ ಬೇಬಿ' ರೀಮೇಕ್ನಲ್ಲಿ ನಟಿಸಲು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.