ಹೈದರಾಬಾದ್:ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ (ಎನ್.ಟಿ.ರಾಮರಾವ್ ಜೂನಿಯರ್) ಕಳೆದ ಅಗಸ್ಟ್ ತಿಂಗಳಲ್ಲಿ ಲ್ಯಾಂಬೋರ್ಗಿನಿ ಕಂಪನಿಯ ಐಷಾರಾಮಿ ಕಾರನ್ನು ವಿದೇಶದಿಂದ ಖರೀದಿಸಿದ್ದರು.
ಅಂದಹಾಗೆ ಇದು ಲ್ಯಾಂಬೋರ್ಗಿನಿಯ ಉರುಸ್ ಗ್ರಾಫೈಟ್ ಕ್ಯಾಪ್ಸೂಲ್ ಸರಣಿಯ ದುಬಾರಿ ಕಾರು. ಇದನ್ನು ಖರೀದಿಸುವ ಮೂಲಕ ಈ ಮಾಡೆಲ್ ಕಾರು ಖರೀದಿಸಿರುವ ದೇಶದ ಮೊದಲ ವ್ಯಕ್ತಿ ಎಂದು ಜೂ.ಎನ್.ಟಿ.ಆರ್ ಪರಿಗಣಿಸಲ್ಪಟ್ಟಿದ್ದಾರೆ. ಇದೀಗ ಕಾರಿನ ಫ್ಯಾನ್ಸಿ ನೋಂದಣಿ ಸಂಖ್ಯೆಗೋಸ್ಕರ ಅವರು ಬರೋಬ್ಬರಿ 17 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಫ್ಯಾನ್ಸಿ ನಂಬರ್ TS09 FS 9999ಪಡೆದುಕೊಳ್ಳುವ ಉದ್ದೇಶದಿಂದ ಬರೋಬ್ಬರಿ 17 ಲಕ್ಷ ರೂಪಾಯಿ ಪಾವತಿಸಿದ್ದು, ಈ ವಿಚಾರವನ್ನು ಖುದ್ದಾಗಿ ತೆಲಂಗಾಣದ ಖೈರತಾಬಾದ್ನ ಆರ್ಟಿಒ ಮೂಲಗಳು ತಿಳಿಸಿವೆ.
ಎನ್ಟಿಆರ್ ಲ್ಯಾಂಬೋರ್ಗಿನಿ ಕಾರು
ಲ್ಯಾಂಬೋರ್ಗಿನಿ ಉರುಸ್ ಐಷಾರಾಮಿ ಕಾರಿನ ಬೆಲೆ ಅಂದಾಜು 3.16 ಕೋಟಿ ರೂ ಅಂತೆ. ಇದು ಎಕ್ಸ್ ಷೋರೂಂ ಬೆಲೆಯಾಗಿದ್ದು, ತೆರಿಗೆ ಸೇರಿ ಮತ್ತಷ್ಟು ಹೆಚ್ಚಾಗಲಿದೆ.
ನಟ ಜೂನಿಯರ್ ಎನ್ಟಿಆರ್
ಏನಿದರ ಸ್ಪೆಷಾಲಿಟಿ?:ಲ್ಯಾಂಬೋರ್ಗಿನಿ ಊರುಸ್ 4.0-ಲೀಟರ್ ವಿ 8 ಟ್ವಿನ್-ಟರ್ಬೊ ಇಂಜಿನ್ ಆಗಿದ್ದು, 6,000 ಆರ್‌ಪಿಎಮ್‌ನ 650 ಬಿಎಚ್‌ಪಿ ಇಂಜಿನ್ ಹೊಂದಿದೆ. ಗರಿಷ್ಠ 6,800 ಆರ್‌ಪಿಎಂ ಮತ್ತು 2,250 ಆರ್‌ಪಿಎಂನಲ್ಲಿ 850 ಎನ್ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಊರುಸ್ 0-100 ಕಿಮೀ ವೇಗವನ್ನು 3.6 ಸೆಕೆಂಡುಗಳಲ್ಲಿ ಹಾಗೂ 0-200 ಕಿಮೀ ವರೆಗಿನ ವೇಗವನ್ನ 12.8 ಸೆಕೆಂಡುಗಳಲ್ಲಿ ಗರಿಷ್ಠವಾಗಿ ಪಡೆಯುತ್ತದೆ. ಈ ಕಾರು, ಪ್ರತಿ ಗಂಟೆಗೆ 305 ಕಿಮೀ ವೇಗದಲ್ಲಿ ಮುನ್ನುಗ್ಗಲಿದೆ.
ಇದನ್ನೂ ಓದಿ:ದುಬಾರಿ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ ಟಾಲಿವುಡ್ ನಟ: ಇಂಥಾ ಕಾರು ಖರೀದಿಸಿದ ಮೊದಲ ಭಾರತೀಯ ಇವರೇ.!
ಜೂನಿಯರ್ ಎನ್ಟಿಆರ್ ಸದ್ಯ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದಲ್ಲಿ ನಟನೆ ಮಾಡಿದ್ದು, ಬಿಡುಗಡೆಗೋಸ್ಕರ ಕಾತುರದಿಂದ ಎಲ್ಲರೂ ಕಾಯುತ್ತಿದ್ದಾರೆ.