ಕರ್ನಾಟಕ

karnataka

ETV Bharat / sitara

Watch.. ಮತ್ತೆ ಯಾವತ್ತೂ ಈ ಹಾಡು ಹಾಡುವುದಿಲ್ಲ... ಅಪ್ಪು ನೆನೆದು ಎನ್​ಟಿಆರ್ ಭಾವುಕ - ಅಪ್ಪುಗಾಗಿ ಗೆಳೆಯಾ ಗೆಳೆಯಾ ಹಾಡು ಹಾಡಿದ ಎನ್​ಟಿಆರ್

ಪುನೀತ್ ರಾಜಕುಮಾರ್ ನೆನೆದು ಜ್ಯೂ.ಎನ್​ಟಿಆರ್, ಗೆಳೆಯಾ ಗೆಳೆಯಾ ಹಾಡು ಹಾಡಿ ಭಾವುಕರಾದರು. ಆರ್​ಆರ್​ಆರ್ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ ವೇಳೆ ಅಪ್ಪು ಕುರಿತು ಎನ್​ಟಿಆರ್ ಮಾತನಾಡಿದರು.

NTR Emotional song For Appu, ಅಪ್ಪು ನೆನೆದು ಎನ್​ಟಿಆರ್ ಭಾವುಕ
ಅಪ್ಪು ನೆನೆದು ಎನ್​ಟಿಆರ್ ಭಾವುಕ

By

Published : Dec 10, 2021, 4:01 PM IST

Updated : Dec 10, 2021, 4:14 PM IST

ಕನ್ನಡ ಚಿತ್ರರಂಗದ ದೊಡ್ಮನೆ ಮಗ ಪುನೀತ್​ ರಾಜ್​ಕುಮಾರ್ ನಿಧನರಾಗಿ ಒಂದೂವರೆ ತಿಂಗಳು ಆಗುತ್ತಿದೆ. ಆದರೆ, ರಾಜರತ್ನನ ಆ ನಗು ಹಾಗೂ ಒಳ್ಳೆಯ ಕೆಲಸಗಳು ಎಂದಿಗೂ ಅಮರ. ಇನ್ನು ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ಆಗಲಿ ಅಲ್ಲಿ ಮೊದಲಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಲಾಗುತ್ತದೆ. ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯ ಸ್ಟಾರ್​ಗಳ ಜೊತೆಯೂ ಅಪ್ಪು ಸ್ನೇಹ ಹೊಂದಿದ್ದವರು.

ಹಾಗೆಯೇ ಟಾಲಿವುಡ್ ಯಂಗ್ ಟೈಗರ್ ಜ್ಯೂ.ಎನ್​ಟಿಆರ್ ಜೊತೆ ಪುನೀತ್ ರಾಜ್ ಕುಮಾರ್ ಆತ್ಮೀಯ ಸ್ನೇಹ ಹೊಂದಿದ್ದರು. ಅಂತೆಯೇ ಇಂದು ಆರ್​ಆರ್​ಆರ್ ಚಿತ್ರದ ಪ್ರೆಸ್ ​ಮೀಟ್​ ವೇಳೆ ಗೆಳೆಯನ ನೆನೆದು ಜ್ಯೂ.ಎನ್​ಟಿಆರ್ ಭಾವುಕರಾದರು. ಅಪ್ಪು ನಟನೆಯ ಚಕ್ರವ್ಯೂಹ ಚಿತ್ರದ ಗೆಳೆಯಾ ಗೆಳೆಯಾ ಹಾಡನ್ನು ಹಾಡಿದರು. ಇದೇ ವೇಳೆ ಮಾತನಾಡಿ, ಪುನೀತ್​ ಇಲ್ಲದ ಕರ್ನಾಟಕ ನನಗೆ ಶೂನ್ಯವಾಗಿ ಕಾಣುತ್ತಿದೆ. ಅವರು ಎಲ್ಲೇ ಇದ್ದರೂ ಅವರ ಆಶೀರ್ವಾದ ನನ್ನ ಮೇಲಿರುತ್ತೆ ಎಂದು ಭಾವುಕರಾದರು.

ಅಪ್ಪು ನೆನೆದು ಎನ್​ಟಿಆರ್ ಭಾವುಕ

ನಾನು ಈ ಹಾಡನ್ನು ಪುನೀತ್​ಗಾಗಿ ಎಂದಿಗೂ ಹೇಳಿರಲಿಲ್ಲ. ಇದೇ ಮೊದಲು ಮತ್ತು ಇದೇ ಕೊನೆ. ಈ ಹಾಡನ್ನು ಮತ್ತೆ ಹಾಡುವುದಿಲ್ಲ ಎಂದು ಗೆಳೆಯಾ ಗೆಳೆಯಾ ಎಂದು ಹಾಡಿ ಕಣ್ಣಾಲೆಗಳನ್ನು ತೇವ ಮಾಡಿಕೊಂಡರು. ಇನ್ನು ಎನ್​​ಟಿಆರ್​ ಕುಟುಂಬಕ್ಕೂ ಹಾಗೂ ರಾಜ್​ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಪುನೀತ್ ಅವರ ಪಾರ್ಥಿವ ಶರೀರದ ದರ್ಶನಕ್ಕೂ ಜ್ಯೂ.ಎನ್​ಟಿಆರ್ ಆಗಮಿಸಿ, ಗೌರವನ ನಮನ ಸಲ್ಲಿಸಿದ್ದರು.

ಅಪ್ಪು, ಜ್ಯೂ.ಎನ್​ಟಿಆರ್

(ಇದನ್ನೂ ಓದಿ: 'ಮಾತೃ ಭಾಷೆ'ಯಲ್ಲಿ ಮಾತನಾಡಿದ ಯಂಗ್​ ಟೈಗರ್​​ ಜೂ. ಎನ್​ಟಿಆರ್​​)

Last Updated : Dec 10, 2021, 4:14 PM IST

ABOUT THE AUTHOR

...view details