ಕರ್ನಾಟಕ

karnataka

ETV Bharat / sitara

ಸಿಸಿಬಿ ನೋಟಿಸ್​ಗೆ ಹೆದರಿ ಬೆಂಗಳೂರು ಬಿಟ್ರಾ ದಿಗಂತ್, ಐಂದ್ರಿತಾ ರೇ? - ಸಿಸಿಬಿಯಿಂದ ಐಂದ್ರಿತಾ ರೇ ಮತ್ತು ದಿಗಂತ್‌ಗೆ ನೋಟಿಸ್​

ಕಳೆದ 15 ದಿನಗಳಿಂದ ಡ್ರಗ್ಸ್ ಜಾಲದ ನಂಟು ಕನ್ನಡ ಚಿತ್ರರಂಗದ ಕೆಲ ನಟ-ನಟಿಯರ‌ ನಿದ್ದೆಗೆಡಿಸಿದ್ದು ಸುಳ್ಳಲ್ಲ. ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಬಳಿಕ ಸಿಸಿಬಿ ಅಧಿಕಾರಿಗಳು ದೂದ್ ಪೇಡಾ ದಿಗಂತ್ ಮತ್ತು ಪತ್ನಿ ಐಂದ್ರಿತಾ ರೇಗೆ ವಿಚಾರಣಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ.

Notice from CCB to Aindrita Ray and Diganth
ದೂದ್ ಪೇಡಾ ದಿಗಂತ್ ಮತ್ತು ಪತ್ನಿ ಐಂದ್ರಿತಾ ರೇ

By

Published : Sep 15, 2020, 5:43 PM IST

Updated : Sep 15, 2020, 8:28 PM IST

ವೀಕೆಂಡ್​ನ​​ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ದಿಗಂತ್​ ಮತ್ತು ಐಂದ್ರಿತಾ ರೇ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಡ್ರಗ್ಸ್ ಸರಬರಾಜು ಆರೋಪ ಹೊತ್ತಿರುವ ಶೇಕ್ ಫಾಜಿಲ್ ಜೊತೆಗೆ ಐಂದ್ರಿತಾ ರೇ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಇದೀಗ ರಿವೀಲ್​ ಆಗಿವೆ.

ಶೇಕ್ ಫಾಝಿಲ್ ಹಾಗೂ ವಿವಿಧ ನಟರೊಂದಿಗೆ ಕಾಣಿಸಿಕೊಂಡ ಐಂದ್ರಿತಾ ರೇ

ಐಂದ್ರಿತಾ ರೇ ಒಂದು ಕಡೆ ರಾಗಿಣಿ ಸ್ನೇಹಿತೆ. ಇನ್ನು ಈ ಡ್ರಗ್ಸ್ ಜಾಲದಲ್ಲಿ ದಿಗಂತ್ ಮತ್ತು ಐಂದ್ರಿತಾ ರೇ ಹೆಸರು ಇರುವುದನ್ನು ಪೆಡ್ಲರ್​​ಗಳು ಮೊದಲೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಅಧಿಕಾರಿಗಳು ಇಬ್ಬರಿಗೂ ನೋಟಿಸ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಶೇಕ್ ಫಾಝಿಲ್ ಹಾಗೂ ವಿವಿಧ ನಟರೊಂದಿಗೆ ಕಾಣಿಸಿಕೊಂಡ ಐಂದ್ರಿತಾ ರೇ

ಇನ್ನು ಈ ಬಗ್ಗೆ ಮಾಹಿತಿ ಕೇಳಲು ಯತ್ನಿಸಲಾಗುತ್ತಿದ್ದು ದಿಗಂತ್ ಮತ್ತು ಐಂದ್ರಿತಾ ರೇ ಫೋನ್​ ಕರೆ ಸ್ವೀಕರಿಸುತ್ತಿಲ್ಲ. ಸಿಸಿಬಿ ಅಧಿಕಾರಿಗಳು ನೋಟಿಸ್​ ನೀಡಲಿದ್ದಾರೆ ಎಂಬ ಮಾಹಿತಿ ಮೊದಲೇ ಗೊತ್ತಿರುವುದರಿಂದ ಗಂಡ ಹೆಂಡತಿ ಇಬ್ಬರು ಬೆಂಗಳೂರು ಬಿಟ್ಟು ಹೊರಗಡೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ನಾಳೆ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು ಏನಾಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.

ಶೇಕ್ ಫಾಝಿಲ್ ಹಾಗೂ ವಿವಿಧ ನಟರೊಂದಿಗೆ ಕಾಣಿಸಿಕೊಂಡ ಐಂದ್ರಿತಾ ರೇ

ಮತ್ತೊಂದು ಮಾಹಿತಿ ಪ್ರಕಾರ ಈ ಬಗ್ಗೆ ಗಂಡ ಹೆಂಡತಿ ಇಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಸಹ ಬಂದಿದೆ. ನಾವು ಎಲ್ಲಿಯೂ ಓಡಿ ಬಹೋಗಲ್ಲ, ನಾಳೆ ಬೆಳಗ್ಗೆ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ದಿಗಂತ್ ವಾಟ್ಸಪ್​ ಮಾಡಿದರೆ, ಐಂದ್ರಿತಾ ಟ್ವೀಟ್​ ಮಾಡಿದ್ದಾರೆ.

ಸ್ನೇಹಿತೆ ರಾಗಿಣಿ ಜೊತೆ ಐಂದ್ರಿತಾ ರೇ
ದಿಗಂತ್, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್​
Last Updated : Sep 15, 2020, 8:28 PM IST

ABOUT THE AUTHOR

...view details