ಕರ್ನಾಟಕ

karnataka

ETV Bharat / sitara

ಮಲಯಾಳಂ ಖ್ಯಾತ ಚಲನಚಿತ್ರ ನಟ ನೆಡುಮುಡಿ ವೇಣು ನಿಧನ.. - Malayalam actor Nedumudi Venu passes away

ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ ವೇಣು ಕೊನೆಯುಸಿರೆಳೆದಿದ್ದಾರೆ. ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Nedumudi Venu
ನಟ ನೆಡುಮುಡಿ ವೇಣು

By

Published : Oct 11, 2021, 3:41 PM IST

ತಿರುವನಂತಪುರಂ(ಕೇರಳ): ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟ ನೆಡುಮುಡಿ ವೇಣು (73) ಇಂದು ತಿರುವನಂತಪುರಂನಲ್ಲಿ ನಿಧನರಾದರು.

ವಯೋಸಹಜ ಅನಾರೋಗ್ಯದ ಹಿನ್ನೆಲೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರ ಸ್ಥಿತಿ ಹದಗೆಟ್ಟಿತು. ನಂತರ ಅವರು ಆಸ್ಪತ್ರೆಯ ಐಸಿಯುನಲ್ಲಿ ಕೊನೆಯುಸಿರೆಳೆದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಂತಾಪ ಸೂಚಿಸಿದ್ದಾರೆ. ನೆಡುಮುಡಿ ವೇಣು ಅವರು ಅಸಾಧಾರಣ ನಟನಾ ಪ್ರತಿಭೆಯಿಂದ ಮಲಯಾಳಂನಲ್ಲಿ ಮಾತ್ರವಲ್ಲದೆ ಇತರ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ ಎಂದಿದ್ದಾರೆ.

ವೇಣು ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟ. ಅಲ್ಲದೇ, ಇವರು ಸುಮಾರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ಆರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರು ಪ್ರಸಿದ್ಧ ತಾಳವಾದ್ಯಕಾರ ಮತ್ತು ರಂಗಭೂಮಿ ಕಲಾವಿದರೂ ಆಗಿದ್ದರು.

ಓದಿ:ಸೆಲೆಬ್ರಿಟಿ ಹೇರ್​ ಸ್ಟೈಲಿಸ್ಟ್ ಆಲಿಮ್​ ಹಕೀಮ್ ಸಲೂನ್​ನಲ್ಲಿ ರಾಕಿ ಭಾಯ್​.. ಯಶ್​ ಕೇಶ ವಿನ್ಯಾಸಕ್ಕೆ ನೆಟ್ಟಿಗರು ಫಿದಾ..

ABOUT THE AUTHOR

...view details