ಧಾರಾವಾಹಿ ಪ್ರಿಯರ ಮನಗೆದ್ದ 'ಜೊತೆ ಜೊತೆಯಲಿ' ತಂಡ ಚಿತ್ರೀಕರಣ ಆರಂಭಿಸಿ ವರ್ಷ ತುಂಬಿದ ಖುಷಿಯಲ್ಲಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆರೂರು ಜಗದೀಶ್ ನಿರ್ದೇಶನದ ಸೂಪರ್ ಹಿಟ್ ಫ್ಯಾಮಿಲಿ ಸೀರಿಯಲ್ ಪ್ರಸಾರ ಅರಂಭಿಸಿತ್ತು. ವರ್ಷದ ತುಂಬಿದ ಸಂತಸದ ವಿಚಾರವನ್ನು ಧಾರಾವಾಹಿಯ ಕೇಂದ್ರಬಿಂದು ಅನಿರುದ್ಧ್ ತಿಳಿಸಿದ್ದಾರೆ.
'ಜೊತೆ ಜೊತೆಯಲಿ' ಚಿತ್ರೀಕರಣ ಆರಂಭಿಸಿ ಒಂದು ವರ್ಷ: ಅಪರೂಪದ ಕ್ಷಣಗಳನ್ನು ನೆನಪಿಸಿದ ಅನಿರುದ್ಧ್ - ಜೊತೆಜೊತೆಯಲಿ ಧಾರವಾಹಿಯ ಚಿತ್ರೀಕರಣ
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಸಾರ ಆರಂಭಿಸಿದ ಆರೂರು ಜಗದೀಶ್ ನಿರ್ದೇಶನದ ಸೂಪರ್ ಹಿಟ್ ಧಾರಾವಾಹಿ 'ಜೊತೆ ಜೊತೆಯಲಿ' ಚಿತ್ರೀಕರಣ ಆರಂಭಿಸಿ ಒಂದು ವರ್ಷವಾಗಿದೆ.
'ಜೊತೆ ಜೊತೆಯಲಿ' ನಾಯಕ (ಆರ್ಯವರ್ಧನ್) ಅನಿರುದ್ಧ್ ಮೊದಲ ಚಿತ್ರೀಕರಣ ದಿನಗಳ ಕ್ಷಣಗಳನ್ನು ಚಿತ್ರಗಳ ಮೂಲಕ ನೆನಪಿಸಿಕೊಂಡಿದ್ದಾರೆ.
ಫೇಸ್‌ಬುಕ್ ಪೇಜ್‌ನಲ್ಲಿ ಧಾರಾವಾಹಿಯ ಒಂದಷ್ಟು ಫೋಟೋಗಳನ್ನು ಕೊಲಾಜ್ ಮಾಡಿ ಹಾಕಿರುವ ಅನಿರುದ್ಧ್, ಧನ್ಯವಾದಗಳು ಕರ್ನಾಟಕ. ನಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಯಾಗಿ ಮುನ್ನಡೆಸಿದ್ದೀರಿ. ನಮ್ಮ ಬೃಹತ್ ಕುಟುಂಬವಾದ ನಿಮ್ಮೆಲ್ಲರಿಗೂ ಹಾಗೂ ಜೀ ಕನ್ನಡ ಕುಟುಂಬದ ಪ್ರತಿಯೊಬ್ಬರಿಗೂ ಧನ್ಯವಾದ. ಜೊತೆಗೆ ನನ್ನ ವೈಯಕ್ತಿಕ ಕುಟುಂಬಕ್ಕೂ ಅನಂತ ಕೋಟಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಪ್ರೋತ್ಸಾಹ ಸದಾ ಹೀಗೆಯೇ ಇರಲಿ ಎಂದು ಬರೆದುಕೊಂಡಿದ್ದಾರೆ.