ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟಿ, ನೃತ್ಯಗಾರ್ತಿ ನೋರಾ ಫತೇಹಿ ಅವರ ಕಾರು ಮುಂಬೈನಲ್ಲಿ ಅಪಘಾತಕ್ಕೀಡಾಗಿದೆ. ನಟಿಯ ಅಭಿಮಾನಿಗಳಿಗೆ ಸಿಹಿ ಸುದ್ದಿ ಏನೆಂದರೆ ಅಪಘಾತದ ಸಮಯದಲ್ಲಿ ನೋರಾ ಕಾರಿನಲ್ಲಿ ಇರಲಿಲ್ಲ.
ಮೊನ್ನೆ ಮಂಗಳವಾರ ಸಂಜೆ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಂಜಾಬಿ ಗಾಯಕ ಗುರು ರಾಂಧವಾ ಅವರ ಜೊತೆಗಿನ 'ಡ್ಯಾನ್ಸ್ ಮೇರಿ ರಾಣಿ' ಹೊಸ ಆಲ್ಬಮ್ ಹಾಡಿನ ಪ್ರಚಾರಕ್ಕೆ ನಟಿ ಮುಂಬೈಗೆ ಬಂದಿದ್ದರು. ನೋರಾ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ವೇಳೆ ಅವರ ಕಾಡು ಆಟೋವೊಂದಕ್ಕೆ ಗುದ್ದಿದೆ. ತಕ್ಷಣವೇ ಅಲ್ಲಿದ್ದ ಜನರು ಕಾರನ್ನು ಸುತ್ತುವರೆದು ಚಾಲಕನನ್ನು ಹೊರಗೆಳೆದು ತರಾಟೆಗೆ ತೆಗೆದುಕೊಂಡಿದ್ದಾರೆ.