ಕರ್ನಾಟಕ

karnataka

ETV Bharat / sitara

ನಿರ್ದೇಶಕ ಪವನ್​​​ ಒಡೆಯರ್​​ಗೆ ಊಟ ಸಿಗುತ್ತಿಲ್ವಂತೆ! - ನಿರ್ದೇಶಕ ಪವನ್​ ಒಡೆಯರ್

ನಿರ್ದೇಶಕ ಪವನ್​​​ ಒಡೆಯರ್,​​ ನನಗೆ ಊಟ ಸಿಗುತ್ತಿಲ್ಲ ಎಂದು ಗೋಳಾಡುತ್ತ ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಆಫ್ರಿಕಾದಲ್ಲಿ ವೆಜ್​ ಊಟವೇ ಸಿಗುತ್ತಿಲ್ಲ. ನಾನು ಬರೀ ಚಾಕೊಲೇಟ್​​ ತಿಂದುಕೊಂಡು ಇದ್ದೇನೆ ಎಂದಿದ್ದಾರೆ.

no veg food in Africa for pavan odeyar
ನಿರ್ದೇಶಕ ಪವನ್​ ಒಡೆಯರ್

By

Published : Dec 21, 2019, 10:07 AM IST

ನಟ ಸಾರ್ವಭೌಮ ಸಿನಿಮಾ ಖ್ಯಾತಿ ಸ್ಯಾಂಡಲ್​​ವುಡ್​​ ನಿರ್ದೇಶಕ ಪವನ್​​​ ಒಡೆಯರ್,​​ ನನಗೆ ಊಟ ಸಿಗುತ್ತಿಲ್ಲ ಎಂದು ಗೋಳಾಡುತ್ತ ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

ಹೌದು, ಪವನ್​ ಒಡೆಯರ್​​ ರೆಮೋ ಸಿನಿಮಾ ಶೂಟಿಂಗ್​​ಗಾಗಿ ಆಫ್ರಿಕಾಗೆ ತೆರಳಿದ್ರು. ಈ ವೇಳೆ ಆಫ್ರಿಕಾದಲ್ಲಿ ವೆಜ್​ ಊಟವೇ ಸಿಕ್ಕಿಲ್ಲವಂತೆ. ನಾನು ಬರೀ ಚಾಕೊಲೇಟ್​​ ತಿಂದುಕೊಂಡು ಇದ್ದೇನೆ. ನನಗೆ ಈ ಚಾಕೊಲೇಟ್​​ ಕಂಪನಿಗಳೇ ಹೊಟ್ಟೆ ತುಂಬಿಸುತ್ತಿವೆ. ಇನ್ನು ಸ್ವಲ್ಪ ಹೊತ್ತು ಕಳೆದ್ರೆ ಹುಲ್ಲು ತಿನ್ನುವ ಪರಿಸ್ಥಿತಿ ಬರುತ್ತದೆ ಎಂದು ಹಾಸ್ಯವಾಗಿ ಹೇಳಿದ್ದಾರೆ.

ಇನ್ನು ಈ ವಿಡಿಯೋ ಮಾಡುವಾಗ ಡ್ಯಾನ್ಸ್​​ ಮಾಸ್ಟರ್​​ ಇಮ್ರಾನ್​​, ಸಿನಿಮಾ ನಾಯಕ ಇಶಾನ್​​, ಛಾಯಾಗ್ರಾಹಣ ನಿರ್ದೇಶಕ ವೈದಿ ಸೇರಿದಂತೆ ಹಲವರು ಕೀಟಲೆ, ತರ್ಲೆ ಮಾಡ್ಕೊಂಡು ಮಾತನಾಡಿದ್ದಾರೆ. ಆಫ್ರಿಕಾದ ಬಿಬಿ ಸಿಟಿ ಬಗ್ಗೆ ಹಾಗೂ ಕೆಲವು ಶೂಟಿಂಗ್​ ಸ್ಪಾಟ್​​ ಬಗ್ಗೆ, ಶೂಟಿಂಗ್​ ವೇಳೆ ನಡೆಯುವ ಹಾಸ್ಯ ಸನ್ನಿವೇಶಗಳ ಬಗ್ಗೆ ಹೇಳಿದ್ದಾರೆ.

ಇನ್ನು ರೆಮೋ ಸಿನಿಮಾದಲ್ಲಿ ಇಶಾನ್​ ಮತ್ತು ಆಶಿಕಾ ರಂಗನಾಥ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಫುಲ್​​ ಲವ್​ ಅಂಡ್​​ ರೊಮ್ಯಾಂಟಿಕ್​ ಆಗಿ ಇರುತ್ತದೆ ಎಂದು ನಿರ್ದೇಶಕ ಪವನ್​ ಒಡೆಯರ್​ ಹೇಳಿದ್ದಾರೆ. ಸದ್ಯದಲ್ಲೇ ಸಿನಿಮಾ ಟೀಸರ್​, ಟ್ರೇಲರ್​​ ರಿಲೀಸ್​​ ಆಗಲಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.

ABOUT THE AUTHOR

...view details