ಕರ್ನಾಟಕ

karnataka

ETV Bharat / sitara

ಶಕೀಲ ಬಯೋಪಿಕ್​.. 'ಡರ್ಟಿ ಪಿಕ್ಚರ್​' ಜತೆ ಹೋಲಿಕೆ ಬೇಡ ಎಂದ ಇಜಿಲ - Director Indrajit lankesh latest news

'ಸಿಲ್ಕ್​ ಸ್ಮಿತಾ ಅವರು ಐಟಂ ಡ್ಯಾನ್ಸರ್​ ಆಗಿದ್ದವರು. ದೊಡ್ಡದೊಡ್ಡ ಹೀರೋಗಳ ಚಿತ್ರಗಳು ಸೋಲುವ ಸಂದರ್ಭದಲ್ಲಿ, ಸಿಲ್ಕ್​ ಸ್ಮಿತಾ ಅವರ ಹಾಡನ್ನು ಹಾಕಿ ಕೊಂಡರೆ ಪಿಕ್ಚರ್​ ಹಿಟ್​ ಆಗೋದು. ಆದರೆ, ಶಕೀಲಾ ಹಾಗಲ್ಲ. ಅವರು ಮುಖ್ಯ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡವರು. ಹಾಗಾಗಿ ಶಕೀಲಾ ಮತ್ತು ಸ್ಮಿತಾ ಅವರನ್ನು ಹೋಲಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್​​.

Director Indrajit
ನಿರ್ದೇಶಕ ಇಂದ್ರಜಿತ್ ಲಂಕೇಶ್​​

By

Published : Dec 7, 2020, 5:28 PM IST

ಶಕೀಲ ಕುರಿತು ಬಯೋಪಿಕ್​ ಬರುತ್ತದೆ ಎಂದರೆ ಸಹಜವಾಗಿಯೇ ಇದು ಸಹ ಸಿಲ್ಕ್ ಸ್ಮಿತಾ ಕುರಿತ 'ದಿ ಡರ್ಟಿ ಪಿಕ್ಚರ್​' ಚಿತ್ರದ ತರಹ ಇರಬಹುದಾ ಎಂದು ಹೋಲಿಕೆ ಪ್ರಾರಂಭವಾಗುತ್ತದೆ. ಆದರೆ, 'ದಿ ಡರ್ಟಿ ಪಿಕ್ಚರ್​' ಜತೆಗೆ ಹೋಲಿಕೆ ಬೇಡ ಎನ್ನುತ್ತಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್​.

ಚಿತ್ರದ ಕುರಿತು ಮಾತನಾಡಿದ ಅವರು 'ಸಿಲ್ಕ್​ ಸ್ಮಿತಾ ಅವರು ಐಟಂ ಡ್ಯಾನ್ಸರ್​ ಆಗಿದ್ದವರು. ದೊಡ್ಡದೊಡ್ಡ ಹೀರೋಗಳ ಚಿತ್ರಗಳು ಸೋಲುವ ಸಂದರ್ಭದಲ್ಲಿ, ಸಿಲ್ಕ್​ ಸ್ಮಿತಾ ಅವರ ಹಾಡನ್ನು ಹಾಕಿ ಕೊಂಡರೆ ಪಿಕ್ಚರ್​ ಹಿಟ್​ ಆಗೋದು. ಆದರೆ, ಶಕೀಲಾ ಹಾಗಲ್ಲ. ಅವರು ಮುಖ್ಯಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡವರು. ಹಾಗಾಗಿ ಶಕೀಲಾ ಮತ್ತು ಸ್ಮಿತಾ ಅವರನ್ನು ಹೋಲಿಸುವುದು ಸಾಧ್ಯವಿಲ್ಲ. 'ಡರ್ಟಿ ಪಿಕ್ಚರ್​' ಚಿತ್ರ ನನಗೆ ಬಹಳ ಇಷ್ಟ. ವಿದ್ಯಾ ಬಾಲನ್​ ಅಭಿನಯ ಬಹಳ ಇಷ್ಟ. ಆದರೆ, ಅವೆರೆಡೂ ಸಿನಿಮಾಗಳಿಗೆ ಯಾವುದೇ ಹೋಲಿಕೆ ಇಲ್ಲ. ಇದು ನಿಜವಾದ ಬಯೋಪಿಕ್​. ಒಬ್ಬ ನಟಿಯ ಕಥೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರ' ಎನ್ನುತ್ತಾರೆ ಇಂದ್ರಜಿತ್​.

ಇದನ್ನೂ ಓದಿ: ತಮ್ಮ ಕುರಿತಾದ ಸಿನಿಮಾ ಟ್ರೇಲರ್​​​​​ ಬಿಡುಗಡೆ ಸಮಾರಂಭದಲ್ಲಿ ಬೇಸರ ಹೊರ ಹಾಕಿದ ಶಕೀಲಾ

ಶಕೀಲಾ ಅವರನ್ನು ಒಂದೂವರೆ ದಶಕದಿಂದ ನೋಡುತ್ತಿದ್ದರೂ, 'ಲವ್​ ಯೂ ಆಲಿಯಾ' ಚಿತ್ರದ ಸಂದರ್ಭದಲ್ಲಿ ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. 'ಆ ಚಿತ್ರದ ಸಂದರ್ಭದಲ್ಲಿ ಅವರ ಜೊತೆಗೆ ಬಹಳ ಸಮಯ ಕಳೆದೆ. ಅವರಿಂದ ಹಲವು ವಿಷಯಗಳನ್ನು ತಿಳಿದುಕೊಂಡೆ. ಅವೆಲ್ಲವನ್ನೂ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಇದೊಂದು ಹಿಂದಿ ಸಿನಿಮಾ. ನಂತರ ನಾಲ್ಕು ಭಾಷೆಗಳಿಗೆ ಡಬ್​ ಮಾಡಿದ್ದೇವೆ. ಇದುವರೆಗೂ ಹಲವು ಪ್ಯಾನ್​ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿದ್ದರೂ, ಯಾವ ಚಿತ್ರ ಸಹ ಅಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಈ ಚಿತ್ರವು ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿವೆ' ಎಂದು ಇಂದ್ರಜಿತ್ ತಿಳಿಸಿದ್ದಾರೆ​.

ABOUT THE AUTHOR

...view details