ಕರ್ನಾಟಕ

karnataka

By

Published : Dec 2, 2019, 2:44 PM IST

Updated : Dec 2, 2019, 3:09 PM IST

ETV Bharat / sitara

ಆಹಾ.. ನನ್ನ ಮದುವೆ ಅಂತಿದ್ದಾರೆ ರಚಿತಾ ರಾಮ್​​​ ಸಹೋದರಿ : ಮದುವೆ ಗಂಡು ಯಾರ್​ ಗೊತ್ತಾ?

ನಟಿ ರಚಿತಾ ರಾಮ್​​ ಸಹೋದರಿ ನಿತ್ಯಾ ರಾಮ್ ಆಸ್ಟ್ರೇಲಿಯಾದ  ಬ್ಯುಸಿನೆಸ್​​ ಮ್ಯಾನ್​​ ಗೌತಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

nityaram engagement
ನಟಿ ರಚಿತಾ ರಾಮ್​​ ಸಹೋದರಿ ನಿತ್ಯಾ ರಾಮ್

ಕಿರುತೆರೆಯ 'ನಂದಿನಿ' ಧಾರಾವಾಹಿಯ 'ಜನನಿ'ಯಾಗಿ ಮನೆ ಮಾತಾಗಿರುವ ನಿತ್ಯಾ ರಾಮ್ ಆಸ್ಟ್ರೇಲಿಯಾದ ಬ್ಯುಸಿನೆಸ್​​ ಮ್ಯಾನ್​​ ಗೌತಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗಾಗಲೇ ಇವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿನ್ನೆಯಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಇದೇ ಶುಕ್ರವಾರದಂದು (ಡಿಸೆಂಬರ್ 5 ರಂದು) ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಪರಸ್ಪರ ಉಂಗುರ ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.‌ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಆತ್ಮೀಯರು ಹಾಗೂ ಕುಟುಂಬಸ್ಥರು ಸೇರಿದಂತೆ ಹಲವು ಇದ್ದಾರೆ.

ನಿತ್ಯಾ ರಾಮ್​​ ಮತ್ತು ಗೌತಮ್​
ನಿತ್ಯಾ ರಾಮ್​​ ಮತ್ತು ಗೌತಮ್​
ನಿತ್ಯಾ ರಾಮ್​​ ಮತ್ತು ಗೌತಮ್​
ನಿತ್ಯಾ ರಾಮ್​, ರಚಿತಾ ರಾಮ್​​, ಗೌತಮ್​

ಬೆಂಕಿಯಲ್ಲಿ ಅರಳಿದ ಹೂವು ಧಾರಾವಾಹಿಯ ಮೂಲಕ ಬಣ್ಣದ ಪಯಣ ಆರಂಭಿಸಿದ ನಿತ್ಯಾ ರಾಮ್, ಮುಂದೆ ಎರಡು ಕನಸು, ರಾಜಕುಮಾರಿ, ಕರ್ಪೂರದ ಗೊಂಬೆ, ನಂದಿನಿ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಇದರ ಜೊತೆಗೆ ಮುದ್ದು ಮನಸೇ ಎಂಬ ಸಿನಿಮಾದಲ್ಲೂ ಅಭಿನಯಿಸಿದ್ದರು.

Last Updated : Dec 2, 2019, 3:09 PM IST

ABOUT THE AUTHOR

...view details