ಕರ್ನಾಟಕ

karnataka

ETV Bharat / sitara

ಹಾಲಿವುಡ್​​​ಗೆ ಹಾರಿದ ನಿತ್ಯಾ ಮೆನನ್​​... ಯಾವ ಸಿನಿಮಾ, ಯಾವ ಪಾತ್ರ? - ನಿತ್ಯಾ ಮೆನನ್ ಹಾಲಿವುಡ್ ಜರ್ನಿ

ವಾಲ್ಟ್​ ಡಿಸ್ನಿ ಸಂಸ್ಥೆ ನಿರ್ಮಿಸುತ್ತಿರುವ 'ಪ್ರೋಜನ್​-2' ಎಂಬ ಹಾಲಿವುಡ್​​ ಸಿನಿಮಾದಲ್ಲಿ ನಿತ್ಯಾ, 'ಎಲ್ಸಾ' ಎಂಬ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ವಾಲ್ಟ್ ಡಿಸ್ನಿ ಸಂಸ್ಥೆಯ ಈ ಸಿನಿಮಾ ನವೆಂಬರ್ 22 ರಂದು ಪ್ರೇಕ್ಷಕರ ಮುಂದೆ ಬರಲಿದೆ.

ನಿತ್ಯಾ ಮೆನನ್

By

Published : Nov 7, 2019, 12:00 AM IST

ಕನ್ನಡ ನಟ-ನಟಿಯರು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ, ಬಾಲಿವುಡ್ ನಟರು ಹಾಲಿವುಡ್​​​ ಸಿನಿಮಾಗಳಲ್ಲಿ ನಟಿಸಿರುವ ಎಷ್ಟೋ ಉದಾಹರಣೆಗಳಿವೆ. ಇದೀಗ ನಿತ್ಯಾ ಮೆನನ್ ಕೂಡಾ ಹಾಲಿವುಡ್​​ಗೆ ಹಾರುತ್ತಿದ್ದಾರೆ.

ಆದ್ರೆ ನಿತ್ಯಾ ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ವಾಲ್ಟ್​ ಡಿಸ್ನಿ ಸಂಸ್ಥೆ ನಿರ್ಮಿಸುತ್ತಿರುವ 'ಪ್ರೋಜನ್​-2' ಎಂಬ ಹಾಲಿವುಡ್​​ ಸಿನಿಮಾದಲ್ಲಿ ನಿತ್ಯಾ, 'ಎಲ್ಸಾ' ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇದಕ್ಕೂ ಮುನ್ನ ಈ ಪಾತ್ರಕ್ಕೆ ನಟಿ ಕಾಜಲ್ ಅಗರ್​ವಾಲ್​​​​​​ ಅಥವಾ ನಿಷಾ ಅಗರ್​ವಾಲ್​​ ಧ್ವನಿ ನೀಡಲಿದ್ದಾರೆ ಎನ್ನಲಾಗಿತ್ತು. ಆದ್ರೆ ಕೊನೆಗೆ ನಿತ್ಯಾಗೆ ಅ ಅವಕಾಶ ಲಭಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿತ್ಯಾ, 'ಇಂತಹ ಪಾತ್ರಕ್ಕೆ ಧ್ವನಿ ನೀಡಲು ನನಗೆ ಅವಕಾಶ ಲಭಿಸಿರುವುದು ನಿಜಕ್ಕೂ ಸಂತೋಷ. ನಾನು ಓದಿರುವ ಅತಿ ದೊಡ್ಡ ಸ್ಕ್ರಿಪ್ಟ್​ಗಳಲ್ಲಿ ಇದೂ ಕೂಡಾ ಒಂದು. ಇದು ಕೇವಲ ತೆಲುಗು ಅಭಿಮಾನಿಗಳಿಗಾಗಿ ಮಾತ್ರ. ಹಿಂದಿ ಭಾಷೆಯ ಎಲ್ಸಾ ಪಾತ್ರಕ್ಕೆ ಪರಿಣಿತಿ ಛೋಪ್ರಾ ಡಬ್ಬಿಂಗ್ ಮಾಡಲಿದ್ದಾರೆ' ಎಂದು ಹೇಳಿದ್ದಾರೆ. ವಾಲ್ಟ್ ಡಿಸ್ನಿ ಸಂಸ್ಥೆಯ ಈ ಸಿನಿಮಾ ನವೆಂಬರ್ 22 ರಂದು ಪ್ರೇಕ್ಷಕರ ಮುಂದೆ ಬರಲಿದೆ. ನಿತ್ಯಾ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್​​​ನ 'ಮಿಷನ್ ಮಂಗಳ್​​​​​' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಪರಿಣಿತಿ ಛೋಪ್ರಾ, ಸೋನಾಕ್ಷಿ ಸಿನ್ಹ ಹಾಗೂ ಇನ್ನಿತರರು ನಟಿಸಿದ್ದರು.

ವಾಲ್ಟ್ ಡಿಸ್ನಿ ಎಲ್ಸಾ ಪಾತ್ರ

ABOUT THE AUTHOR

...view details