ಕರ್ನಾಟಕ

karnataka

ETV Bharat / sitara

ಇಲ್ಲಸಲ್ಲದ ಕಮೆಂಟ್​​​ ಮಾಡಿ ಕಲಾವಿದರಿಗೆ ನೋವು ಮಾಡಬೇಡಿ: ನಿತ್ಯಾ ಮೆನನ್​​​ - ಮಂಕಿ ಹೂ ನ್ಯೂ ಟೂ ಮಚ್​​​​

ಇತ್ತೀಚೆಗೆ ಬಿಡುಗಡೆಯಾದ 'ಮಿಷನ್ ಮಂಗಳ್​​' ಚಿತ್ರದಲ್ಲಿ ನಿತ್ಯಾ ಮೆನನ್ ಅವರನ್ನು ನೋಡಿದ ಜನರು ಅವರ ಬಗ್ಗೆ ಟ್ರೋಲ್ ಮಾಡುತ್ತಲೇ ಇದ್ದಾರೆ. ನಿತ್ಯಾ ಮೆನನ್ ತಿಂದು ತಿಂದು ದಪ್ಪ ಆಗಿದ್ಧಾರೆ. ಅದಕ್ಕೆ ಅವರಿಗೆ ಅವಕಾಶಗಳು ಸಿಗುತ್ತಿಲ್ಲ ಎಂದು ನಿತ್ಯಾ ಅವರ ಬಗ್ಗೆ ಕಮೆಂಟ್ ಮಾಡುತ್ತಿದ್ದು, ಈ ಬಗ್ಗೆ ನಿತ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

ನಿತ್ಯಾ ಮೆನನ್

By

Published : Aug 24, 2019, 6:05 PM IST

ಪ್ರತಿಭಾನ್ವಿತ ನಟಿಯರನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ನಿತ್ಯಾ ಮೆನನ್. ಮಲಯಾಳಂ ಕುಟ್ಟಿ ನಿತ್ಯಾ ಮೆನನ್​​​ ಇತ್ತೀಚೆಗೆ ದಪ್ಪ ಆಗಿದ್ದು, ಇದೇ ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇದೆ.

ಕೋಟಿಗೊಬ್ಬ-2 ಚಿತ್ರದಲ್ಲಿ ಸುದೀಪ್ ಜೊತೆ ನಿತ್ಯಾ ಮೆನನ್​​

'ನಿತ್ಯಾ ಮೆನನ್ ಬಹಳ ಸೋಮಾರಿ. ಅವರು ತುಂಬಾ ತಿಂದು ದಪ್ಪ ಆಗಿದ್ದಾರೆ. ದಪ್ಪ ಇರುವುದರಿಂದಲೇ ಅವಕಾಶಗಳು ಕಡಿಮೆ ಆಗುತ್ತಿವೆ' ಎಂದು ಕೆಲವರು ಕಮೆಂಟ್ ಮಾಡಿದ್ಧಾರೆ. ಆದರೆ ಈ ಕಮೆಂಟ್​​​​ಗಳ​​ ಬಗ್ಗೆ ಇದೀಗ ನಿತ್ಯಾ ತುಟಿ ಬಿಚ್ಚಿದ್ಧಾರೆ. ನನ್ನ ಬಗ್ಗೆ ಈ ರೀತಿ ಕಮೆಂಟ್ ಮಾಡಿದ ವ್ಯಕ್ತಿಗಳು ದಡ್ಡರೆಂದು ನಿತ್ಯಾ ಮೆನನ್ ಜರಿದಿದ್ದಾರೆ. ಅನೇಕರಲ್ಲಿ ತೂಕದ ಸಮಸ್ಯೆ ಇರುತ್ತದೆ. ಆದರೆ ನಟಿಯರು ಯಾವ ಕಾರಣಕ್ಕೂ ಸೋಮಾರಿಗಳಾಗಲು ಸಾಧ್ಯವೇ ಇಲ್ಲ. ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದು ಸುಲಭದ ಮಾತಲ್ಲ. ಪ್ರತಿದಿನ ಸುಮಾರು 8 ಗಂಟೆಗಳ ಕಾಲ ನಿಂತುಕೊಂಡೇ ಇರುತ್ತೇವೆ. ಹಾರ್ಮೋನ್ ಸಮಸ್ಯೆ ಇದ್ದರೆ ತೂಕ ಕಡಿಮೆ ಮಾಡಿಕೊಳ್ಳುವುದು ಕಷ್ಟ. ಚಿತ್ರ ನೋಡಿದ ಪ್ರೇಕ್ಷಕರು ಹೀಗೆಲ್ಲಾ ಕಮೆಂಟ್ ಮಾಡಿದರೆ ಕಲಾವಿದರಿಗೆ ಮತ್ತಷ್ಟು ನೋವು ಉಂಟಾಗುತ್ತದೆ ಎಂದು ಸಹ ಹೇಳಿಕೊಂಡಿದ್ದಾರೆ ನಿತ್ಯಾ.

ನಿತ್ಯಾ ಮೆನನ್​​

ನಿತ್ಯಾ ಮೆನನ್​ 10 ವರ್ಷದ ಬಾಲಕಿ ಆಗಿದ್ದಾಗಲೇ 'ಮಂಕಿ ಹೂ ನ್ಯೂ ಟೂ ಮಚ್​​​​ ಸಿನಿಮಾದಿಂದ' ಚಿತ್ರರಂಗಕ್ಕೆ ಬಂದವರು. 2006ರಲ್ಲಿ ಬಿಡುಗಡೆಯಾದ 'ಸೆವೆನ್ ಓ ಕ್ಲಾಕ್​​​' ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಜೋಶ್, ಮೈನಾ, ಕೋಟಿಗೊಬ್ಬ-2 ಸೇರಿ ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಿತ್ಯಾ ನಟಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಬಿಡುಗಡೆಯಾದ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಿಷನ್ ಮಂಗಳ್​​​​​​​​' ಚಿತ್ರದ ಮೂಲಕ ಅವರು ಬಾಲಿವುಡ್​​​ಗೆ ಕಾಲಿರಿಸಿದ್ದಾರೆ.

ABOUT THE AUTHOR

...view details