ಶರಣ್ ಅಭಿನಯದ 'ಗುರು ಶಿಷ್ಯರು' ಸಿನಿಮಾ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಒಂದು ಹಂತದ ಚಿತ್ರೀಕರಣ ಕೂಡಾ ಮುಗಿದಿದೆ. ಈ ಮಧ್ಯೆ ಶರಣ್‍ಗೆ ನಾಯಕಿ ಯಾರಾಗಬಹುದು ಎಂಬ ಪ್ರಶ್ನೆಯನ್ನು ನಿರ್ದೇಶಕ ಜಡೇಶ್ ಮುಂದಿಟ್ಟರೆ, ಇನ್ನು ಹುಡುಕಾಟ ನಡೆಯುತ್ತಿದೆ ಎಂಬ ಕಾರಣ ನೀಡುತ್ತಿದ್ದರು. ನಾಯಕಿ ಯಾರೆಂದು ಅಧಿಕೃತ ಘೋಷಣೆ ಮಾಡದಿದ್ದರೂ, ಮೂಲಗಳ ಪ್ರಕಾರ ಚಿತ್ರಕ್ಕೆ ನಿಶ್ವಿಕಾ ನಾಯ್ಡು ಆಯ್ಕೆ ಆಗಿದೆ ಎಂದು ಹೇಳಲಾಗುತ್ತಿದೆ.
'ಗುರು ಶಿಷ್ಯರು' ಚಿತ್ರಕ್ಕೆ ನಾಯಕಿಯಾಗಿ ಬಂದ್ರಾ ನಿಶ್ವಿಕಾ ನಾಯ್ಡು...? - Sharan starring new movie
ಶರಣ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ 'ಗುರುಶಿಷ್ಯರು' ಸಿನಿಮಾಗೆ ನಿಶ್ವಿಕಾ ನಾಯ್ಡು ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಶರಣ್ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನಾಗಿ ನಟಿಸುತ್ತಿದ್ದು ಚಿತ್ರವನ್ನು ಜಡೇಶ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ:ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಗ್ಲಾಮರಸ್ ಬೆಡಗಿಯರು
ಲಾಕ್‍ಡೌನ್ ನಂತರ ನಿಶ್ವಿಕಾ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. 'ರಾಮಾರ್ಜುನ' ಚಿತ್ರದ ಪ್ರಚಾರ ಮತ್ತು ಡಬ್ಬಿಂಗ್ ಎಂದು ಓಡಾಡಿಕೊಂಡಿದ್ದರು. ಈಗ ಅವರು 'ಗುರು ಶಿಷ್ಯರು' ಚಿತ್ರದಲ್ಲಿ ನಾಯಕಿಯಾಗುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಈ ಹಿಂದೆ ಅವರು ಜಡೇಶ್ ನಿರ್ದೇಶನದ 'ಜಂಟಲ್‍ಮ್ಯಾನ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಅದೇ ಜಡೇಶ್ ನಿರ್ದೇಶನದ 'ಗುರು ಶಿಷ್ಯರು' ಚಿತ್ರಕ್ಕೆ ನಾಯಕಿ ಆಗಿದ್ದು, ಇದು ಇವರಿಬ್ಬರ ಎರಡನೆಯ ಕಾಂಬಿನೇಶನ್ ಚಿತ್ರವಾಗಲಿದೆ ಎನ್ನುವುದು ವಿಶೇಷ. 'ಗುರು ಶಿಷ್ಯರು' ಒಬ್ಬ ಸರ್ಕಾರಿ ಶಾಲೆ ಪಿಟಿ ಮಾಸ್ಟರ್ ಕುರಿತಾದ ಚಿತ್ರವಾಗಿದ್ದು, ಶರಣ್ ಇಲ್ಲಿ ಗುರು ಎಂಬ ಪಿಟಿ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಮೊದಲ ಬಾರಿಗೆ ಮೀಸೆ ಬಿಟ್ಟಿದ್ದು, ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಮಿಕ್ಕಂತೆ ಚಿತ್ರದಲ್ಲಿ ನಿಶ್ವಿಕಾ ನಾಯ್ಡು, ದತ್ತಣ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವನ್ನು ಶರಣ್ ಮತ್ತು ತರುಣ್ ಸುಧೀರ್ ಜೊತೆಯಾಗಿ ಸೇರಿ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿರುವುದು ವಿಶೇಷ.